ಕಲಿಕೆ ಮತ್ತು ಹಂಚಿಕೆಗೆ ಮಕ್ಕಳಿಗಾಗಿ 100 ಆರೋಗ್ಯ ಸಂದೇಶಗಳು ಸರಳವಾಗಿದ್ದು, ವಿಶ್ವಾಸಾರ್ಹ ಆರೋಗ್ಯ ಶಿಕ್ಷಣ ಸಂದೇಶಗಳು 8-14 ವರ್ಷಗಳ ನಡುವಿನ ಮಕ್ಕಳಿಗೆ ಉದ್ದೇಶಿತವಾಗಿವೆ. ಹಾಗಾಗಿ ಇದು 10-14 ವರ್ಷ ವಯಸ್ಸಿನ ನಡುವಿನ ತರುಣಾವಸ್ಥೆಯವರನ್ನು ಒಳಗೊಳ್ಳುತ್ತದೆ. 10-14 ವರ್ಷ ಪ್ರಾಯದ ತರುಣಾವಸ್ಥೆಯಲ್ಲಿರುವ ಮಕ್ಕಳಿಗೆ ಮಾಹಿತಿ ಒದಗಿಸುತ್ತದೆ ಎಂಬುದನ್ನು ಖಚಿತಪಡಿಸಿಕೊಳ್ಳುವುದು ವಿಶೇಷವಾಗಿ ಉಪಯುಕ್ತವೂ ಹಾಗು ಮುಖ್ಯವಾಗಿರುತ್ತದೆ ಎಂದು ನಾವು ಭಾವಿಸುತ್ತೇವೆ, ಏಕೆಂದರೆ ಈ ವಯಸ್ಸಿನ ಮಕ್ಕಳು ತಮ್ಮ ಕುಟುಂಬದ ಚಿಕ್ಕ ಮಕ್ಕಳ ಮೇಲೆ ಕಾಳಜಿ ವಹಿಸುವುದು ಸಹಜ. ಜೊತೆಗೆ, ಈ ರೀತಿಯಲ್ಲಿ ಅವರ ಕುಟುಂಬಗಳಿಗೆ ಸಹಾಯ ಮಾಡಲು ಅವರು ಮಾಡುತ್ತಿರುವ ಕೆಲಸವನ್ನು ಗುರುತಿಸುವುದು ಮತ್ತು ಮೆಚ್ಚಿಕೊಳ್ಳುವುದು ಮುಖ್ಯವಾಗಿರುತ್ತದೆ.

ಈ ನೂರು ಸಂದೇಶಗಳು ಮಲೇರಿಯಾ, ಭೇದಿ, ಪೌಷ್ಟಿಕತೆ, ಕೆಮ್ಮು-ಶೀತ-ಜ್ವರ, ಹೊಟ್ಟೆಯ ಹುಳುಗಳು, ನೀರು ಹಾಗೂ ಶುಚಿತ್ವ, ಪ್ರತಿರೋಧಕ ಲಸಿಕೆಗಳು, ಎಚ್ಐವಿ ಮತ್ತು ಏಡ್ಸ್, ಹಾಗೂ ಅಪಘಾತಗಳು, ಘಾಯ ಮತ್ತು ಮಕ್ಕಳ ಆರಂಭಿಕ ಬೆಳೆವಣಿಗೆಯಂತಹ ಹತ್ತು ಪ್ರಮುಖ ಆರೋಗ್ಯ ವಿಷಯಗಳಲ್ಲಿ ಪ್ರತಿಯೊಂದರ ಬಗ್ಗೆಯೂ ಹತ್ತು ಸಂದೇಶಗಳನ್ನು ಒಳಗೊಂಡಿವೆ. ಸರಳವಾದ ಈ ಸಂದೇಶಗಳು ಪೋಷಕರಿಗೆ, ಆರೋಗ್ಯ ಶಿಕ್ಷಕರಿಗೆ ಮಕ್ಕಳ ಜೊತೆ ಮನೆಯಲ್ಲಿ, ಶಾಲೆಗಳಲ್ಲಿ, ಕೂಟಗಳಲ್ಲಿ ಹಾಗೂ ಕ್ಲಿನಿಕ್ಕುಗಳಲ್ಲಿ ವ್ಯವಹರಿಸಲು ನೆರವಾಗುತ್ತವೆ.

ಇಲ್ಲಿ ವಿಷಯ 10 ರ ಬಗ್ಗೆ 10 ಸಂದೇಶಗಳಿವೆ: ಎಚ್ಐವಿ ಮತ್ತು ಏಡ್ಸ್

 1. ನಮ್ಮ ದೇಹವು ಅದ್ಭುತವಾಗಿದೆ ಮತ್ತು ಪ್ರತಿದಿನವೂ ನಾವು ಉಸಿರಾಡುವ, ತಿನ್ನುವ, ಕುಡಿಯುವ ಅಥವಾ ಸ್ಪರ್ಶಿಸುವ ಸೂಕ್ಷ್ಮಜೀವಿಗಳಿಂದ ಬರುವ ರೋಗಗಳಿಂದ ರಕ್ಷಿಸಿಕೊಳ್ಳಲು ವಿಶೇಷವಾದ ಮಾರ್ಗಗಳನ್ನು ಹೊಂದಿದೆ.
 2. “ಎಚ್ಐವಿ”ಯು ವೈರಸ್ ಎಂದು ಕರೆಯಲ್ಪಡುವ ಸೂಕ್ಷ್ಮಜೀವಿಯಾಗಿದೆ (ವಿ ಎಂದರೇ ವೈರಸ್ ಎಂದಾಗಿದೆ). ಇದು ತುಂಬಾ ಅಪಾಯಕಾರಿ ಆಗಿದ್ದು, ಇದು ನಮ್ಮ ದೇಹದ ಪ್ರತಿರೋಧದ ಶಕ್ತಿಯನ್ನು ಕಡಿಮೆ ಮಾಡುತ್ತದೆ. ಇದರಿಂದ ನಮ್ಮ ದೇಹವು ಇತರ ಸೂಕ್ಷ್ಮ ಜೀವಿಗಳ ವಿರುದ್ಧ ಹೋರಾಡಲು ಸಹ ಸಾಧ್ಯವಿಲ್ಲ.
 3. ವಿಜ್ಞಾನಿಗಳು ಎಚ್ಐವಿ ವೈರಸನ್ನು ತಡೆಗಟ್ಟಲು ಹಲವು ಔಷಧಿಗಳನ್ನು ಕಂಡು ಹಿಡಿದಿದ್ದಾರೆ. ಆದರೆ ಯಾವ ಔಷದಕ್ಕೂ ದೇಹದಿಂದ ಸಂಪೂರ್ಣವಾಗಿ ಈ ವೈರಸನ್ನು ಕಿತ್ತು ಹಾಕಲು ಸಮರ್ಥತೆಯಿಲ್ಲ.
 4. ಸ್ವಲ್ಪ ಸಮಯದ ನಂತರ ಮತ್ತು ಔಷಧ ಉಪಚಾರ ಇಲ್ಲದ ಎಚ್ಐವಿ ಹೊಂದಿದ ಜನರಲ್ಲಿ ಏಡ್ಸ್ ರೋಗ ಅಭಿವೃದ್ಧಿ ಆಗುತ್ತದೆ. ಏಡ್ಸ್ ಎಂಬುದು ದೇಹವು ದುರ್ಬಲವಾಗುವ ಗಂಭೀರ ರೋಗಗಳ ಗುಂಪಾಗಿದೆ.
 5. ಎಚ್ಐವಿ ಯು ರಕ್ತದಲ್ಲಿ ಮತ್ತು ಇತರ ದ್ರವಗಳೊಂದಿಗೆ ದೇಹದಲ್ಲಿ ವಾಸಿಸುತ್ತದೆ. (1) ಲೈಂಗಿಕತೆಯ ಮೂಲಕ (2) ಸೋಂಕಿತ ತಾಯಿಯಿಂದ ಮಗುವಿಗೆ ಮತ್ತು (3) ರಕ್ತದ ಮೂಲಕವು ಇದು ಹರಡುತ್ತದೆ.
 6. (1) ಲೈಂಗಿಕ ಸಂಬಂಧವಿಲ್ಲದಿರುವಿಕೆ, (2) ನಿಷ್ಠಾವಂತ ಸಂಬಂಧದಲ್ಲಿರುವುದು ಅಥವಾ (3) ಕಾಂಡೋಮಗಳನ್ನು (ಸಂರಕ್ಷಿತ ಲೈಂಗಿಕತೆ) ಬಳಸಿ ಲೈಂಗಿಕತೆಯನ್ನು ಹೊಂದುವುದು. ಇವೆಲ್ಲವೂ ಲೈಂಗಿಕವಾಗಿ HIV ಹರಡುವುದನ್ನು ತಡೆಗಟ್ಟುವ ಅಂಶಗಳಾಗಿವೆ.
 7. ನೀವು ಏಡ್ಸ್ ಪೀಡಿತರೊಂದಿಗೆ ಆಟವಾಡಬಹುದು, ಆಹಾರವನ್ನು ಸೇವಿಸಬಹುದು, ಕುಡಿಯಬಹುದು, ಕೈಗಳನ್ನು ಹಿಡಿದುಕೊಳ್ಳಬಹುದು ಮತ್ತು ತಬ್ಬಿಕೊಳ್ಳಬಹುದು. ಈ ಕ್ರಿಯೆಗಳು ಸುರಕ್ಷಿತವಾಗಿದ್ದು, ಇದರಿಂದ ಅವರ ಎಚ್ ಐ ವಿ ಮತ್ತು ಏಡ್ಸ ನಿಮಗೆ ಅಂಟುವುದಿಲ್ಲ.
 8. ಎಚ್ಐವಿ ಮತ್ತು ಏಡ್ಸ್ ಹೊಂದಿರುವ ಜನರು ಕೆಲವೊಮ್ಮೆ ಭಯ ಮತ್ತು ದುಃಖ ಅನುಭವಿಸುತ್ತಾರೆ. ಪ್ರತಿಯೊಬ್ಬರಂತೆ, ಅವರಿಗೆ ಪ್ರೀತಿ ಮತ್ತು ಬೆಂಬಲ ಬೇಕು, ಮತ್ತು ಅವರ ಕುಟುಂಬಗಳಿಗೂ ಬೆಂಬಲ ಬೇಕು. ಹೀಗಾಗಿ ನಾವು ಅವರೊಂದಿಗೆ ಅವರ ಸಮಸ್ಯೆಗಳ ಕುರಿತು ಮಾತನಾಡಿ ಸೂಕ್ತ ಸಲಹೆ ನೀಡಬೇಕು.
 9. ಎಚ್ಐವಿ ಅಥವಾ ಏಡ್ಸ್ ಹೊಂದಿರಬಹುದು ಎಂದು ಸ್ವಯಂ ಭಾವಿಸುವ ಜನರು ತಮಗೆ ತಾವೇ ಸಹಾಯ ಮಾಡಿಕೊಳ್ಳಲು ಪರೀಕ್ಷೆ ಮತ್ತು ಸಮಾಲೋಚನೆಗಾಗಿ ಕ್ಲಿನಿಕ್ ಅಥವಾ ಆಸ್ಪತ್ರೆಗೆ ಹೋಗಬೇಕು.
 10. ಹೆಚ್ಚಿನ ದೇಶಗಳಲ್ಲಿ, ಎಚ್ಐವಿ ಪಾಸಿಟಿವ್ ಜನರಿಗೆ ಸಹಾಯ ಮತ್ತು ಸೂಕ್ತ ಚಿಕಿತ್ಸೆ ದೊರೆಯುತ್ತಿದೆ. ಆಂಟಿರೆಟ್ರೋವೈರಲ್ ಥೆರಪಿ (ART) ಎಂದು ಕರೆಯಲ್ಪಡುವ ಒಂದು ಔಷಧವು ಅವರಿಗೆ ದೀರ್ಘಕಾಲ ಬದುಕಲು ಸಹಾಯ ಮಾಡುತ್ತದೆ.

ಪರಿಣತ ಆರೋಗ್ಯ ಶಿಕ್ಷಕರು ಹಾಗೂ ತಜ್ಞ ವೈದ್ಯರುಗಳು ಪರಿಶೀಲಿಸಿರುವ ಈ ಆರೋಗ್ಯ ಸಂದೇಶಗಳು ಓ.ಆರ್.ಬಿ. ಯ ಆರೋಗ್ಯ ಕುರಿತ ವೆಬ್ ತಾಣ (http://www.health-orb.org) ದಲ್ಲಿಯೂ ಲಭ್ಯ.

ಈ ವಿಷಯದ ಬಗ್ಗೆ ಇನ್ನಷ್ಟು ಅರಿವು ಮೂಡಲು ಹಾಗೂ ಈ ಸಂದೇಶಗಳನ್ನು ಹಂಚಿಕೊಳ್ಳಲು ಮಕ್ಕಳಿಗೆ ನೆರವಾಗುವ ಕೆಲವು ಚಟುವಟಿಕೆಗಳು ಇಲ್ಲಿವೆ.

ಎಚ್ಐವಿ ಮತ್ತು ಏಡ್ಸ್: ಮಕ್ಕಳು ಏನು ಮಾಡಬಹುದು?

 • ನಮ್ಮ ಸ್ವಂತ ಭಾಷೆಯಲ್ಲಿ ನಮ್ಮದೇ ಆದ ಪದಗಳನ್ನು ಬಳಸಿ ಎಚ್ಐವಿ ಮತ್ತು ಏಡ್ಸ ಕುರಿತು ನಮ್ಮ ಸ್ವಂತ ಸಂದೇಶಗಳನ್ನು ಮಾಡಿ!
 • ಸಂದೇಶಗಳನ್ನು ಮರೆಯದಹಾಗೆ ಬಾಯಿಪಾಠ ಮಾಡಿ!
 • ಇತರ ಮಕ್ಕಳೊಂದಿಗೆ ಮತ್ತು ಇತರರೊಂದಿಗೆ ಈ ಸಂದೇಶಗಳನ್ನು ಹಂಚಿಕೊಳ್ಳಿ.
 • ಎಚ್ಐವಿ ಮತ್ತು ಏಡ್ಸ್ ಬಗ್ಗೆ ಮಾಹಿತಿ ಮತ್ತು ಕರಪತ್ರಗಳನ್ನು ಸಂಗ್ರಹಿಸಿ . ಇವುಗಳನ್ನು ನಮ್ಮ ಸಮುದಾಯದೊಂದಿಗೆ ಹಂಚಿಕೊಳ್ಳಿ.
 • ಎಚ್ಐವಿ ಮತ್ತು ಏಡ್ಸ್ ಕುರಿತು ನಮ್ಮ ಪ್ರಶ್ನೆಗಳಿಗೆ ಉತ್ತರಿಸಲು ಶಾಲೆಗೆ ಆರೋಗ್ಯ ಕಾರ್ಯಕರ್ತರನ್ನು ಆಹ್ವಾನಿಸಿ.
 • ಏಡ್ಸನಿಂದ ಬಾಧಿತವಾಗಿರುವ ನಮ್ಮ ಸಮುದಾಯದಲ್ಲಿನ ಯಾವುದೇ ಮಕ್ಕಳಿಗೆ ಸಹಾಯ ಮಾಡಲು ಮಾರ್ಗಗಳನ್ನು ಹುಡುಕಿ.
 • ಲೈಫ್ಲೈನ್ ಗೇಮ್ ಅನ್ನು ಆಟವಾಡಿ ಮತ್ತು ನಮಗೆ ಎಚ್ಐವಿ ಸಂಪರ್ಕಕ್ಕೆ ತರುವ ಯಾವುದೇ ಅಪಾಯಕಾರಿ ವರ್ತನೆಗಳ ಬಗ್ಗೆ ತಿಳಿದುಕೊಳ್ಳಿ.
 • ಎಚ್ಐವಿ ವ್ಯಕ್ತಿಯಿಂದ ವ್ಯಕ್ತಿಗೆ ಬರುವ ವಿಧಾನಗಳ ಕುರಿತು ಒಂದು “ಸರಿ ಮತ್ತು ತಪ್ಪು” ಆಟವನ್ನು ರಚಿಸಿ ಮತ್ತು ಆಟ ಆಡಿ. ಸಹಾಯ ಮಾಡಲು ಕೊನೆಯಲ್ಲಿ ಕೇಳಬಹುದಾದ ಪ್ರಶ್ನೆಗಳನ್ನು ರಚಿಸಿ.
 • ವಿಶೇಷ ಸ್ನೇಹ ಮತ್ತು ನಮ್ಮ ಲೈಂಗಿಕ ಭಾವನೆಗಳನ್ನು ಕುರಿತು ಮಾತನಾಡಲು ನಮಗೆ ಸಹಾಯ ಮಾಡುವ ಜೀವನ ಕೌಶಲಗಳನ್ನು ಕಲಿಯಿರಿ.
 • ”ದ ಫ್ಲೀಟ್ ಆಫ್ ಹೋಪ್” ಅನ್ನು ಆಡಿ ಮತ್ತು ನಮ್ಮ ವಿಶೇಷ ಸ್ನೇಹಕ್ಕಾಗಿ ಎಚ್ಐವಿಗಳಿಂದ ನಮ್ಮನ್ನು ರಕ್ಷಿಸಿಕೊಳ್ಳಲು ನಾವು ಯಾವ ಸುರಕ್ಷಿತ ನಡವಳಿಕೆಗಳನ್ನು ಆರಿಸಿಕೊಳ್ಳುತ್ತೇವೆ ಎಂಬುದನ್ನು ಕಂಡುಹಿಡಿಯಿರಿ.
 • ಎಚ್ಐವಿ ಅಥವಾ ಏಡ್ಸ್ ಹೊಂದಿರುವ ಯಾರಾದರೂ ಎದುರಿಸಬೇಕಾದ ಎಲ್ಲಾ ತೊಂದರೆಗಳ ಬಗ್ಗೆ ಯೋಚಿಸುವುದು ಮತ್ತು ಅವರಿಗೆ ನಾವು ಸಹಾಯ ಮಾಡಲು ಏನು ಮಾಡಬಹುದು ಎಂದು ಯೋಚಿಸುವುದು
 • ಎಚ್ ಐ ವಿ ಸೋಂಕಿತ ವ್ಯಕ್ತಿಯೊಂದಿಗೆ ಹೇಗೆ ಇರಬೇಕು ಎಂಬುದನ್ನು ತಿಳಿಸುವ ರೋಲ್ ಪ್ಲೇ ಮಾಡಿ
 • ಎಚ್ಐವಿ ಪೀಡಿತರು ಎದುರಿಸುತ್ತಿರುವ ಸಮಸ್ಯೆಗಳು ಮತ್ತು ಅವರೊಂದಿಗೆ ವಾಸಿಸುತ್ತಿರುವ ಜನರ ಸಮಸ್ಯೆಗಳ ಕುರಿತು ಕಥೆಗಳನ್ನು ರಚಿಸಿ ಮತ್ತು ಚರ್ಚಿಸಿ.
 • ನಮಗೆ ಎಚ್ಐವಿ ಮತ್ತು ಏಡ್ಸ್ ಕುರಿತು ನಮಗೆ ಏನು ತಿಳಿದಿದೆ ಎಂದು ಕಂಡುಹಿಡಿಯಲು ರಸಪ್ರಶ್ನೆ ರಚಿಸಿ.
 • ಎಚ್ಐವಿ ಮತ್ತು ಏಡ್ಸ್ ಕುರಿತ ನಮ್ಮ ಪ್ರಶ್ನೆಗಳಿಗೆ ನಮ್ಮ ತರಗತಿಯಲ್ಲಿ ಒಂದು ಪ್ರಶ್ನೆ ಪೆಟ್ಟಿಗೆಯನ್ನು ಪ್ರಾರಂಭಿಸಿ.
 • ಎಚ್ಐವಿ ಮತ್ತು ಏಡ್ಸ್ ಕುರಿತು ನಮ್ಮ ಶಾಲೆಗೆ ಪೋಸ್ಟರ್ ಮಾಡಿ.
 • ಮೀನಾ ಎಂಬ ಹುಡುಗಿ ಅಥವಾ ರಾಜೀವ್ ಎಂಬ ಹುಡುಗ ಮತ್ತು HIV ಹೊಂದಿರುವ ಅವರ ತಾಯಿ ಇವರನ್ನು ಒಳಗೊಂಡ ಒಂದು ನಾಟಕ ರಚಿಸಿ. ಇಲ್ಲಿ ಮೀನಾ ತಮ್ಮ ಎಚ್ ಐ ವಿ ಹೊಂದಿರುವ ತಾಯಿಗೆ ART (ಆಂಟಿ ರೆಟ್ರೊವೈರಲ್ ಥೆರಪಿ) ಔಷಧಿಗಳನ್ನು ಪಡೆಯಲು ಕ್ಲಿನಿಕಗೆ ಹೋಗಲು ತನ್ನ ತಾಯಿಗೆ ಹೇಗೆ ಮನವೊಲಿಸುತ್ತಾರೆ ಎಂಬುದರ ಕುರಿತು ಈ ನಾಟಕ ಮಾಡಿ.
 • ನಮ್ಮ ಶಾಲೆಯಲ್ಲಿ ಮತ್ತು ನಮ್ಮ ಕುಟುಂಬಗಳಲ್ಲಿ ಅರಿವು ಮೂಡಿಸಲು ಎಚ್ಐವಿ ಮತ್ತು ಏಡ್ಸ್ ಆಕ್ಷನ್ ಕ್ಲಬ್ ಅನ್ನು ಪ್ರಾರಂಭಿಸಿ.
 • ನಮ್ಮ ಪ್ರತಿರಕ್ಷಣಾ ವ್ಯವಸ್ಥೆಯು ಹೇಗೆ ಕೆಲಸ ಮಾಡುತ್ತದೆ ಎಂದು ಕೇಳಿ? ನಮ್ಮ ರೋಗ ನಿರೋಧಕ ವ್ಯವಸ್ಥೆಯು ಪ್ರಬಲವಾಗಿ ಉಳಿಯಲು ಮತ್ತು ಕಾರ್ಯಕ್ಕಾಗಿ ಸಿದ್ಧತೆಗೆ ಯಾವ ಆಹಾರಗಳು ಸಹಾಯ ಮಾಡುತ್ತದೆ? ಎಚ್ಐವಿ ಮತ್ತು ಏಡ್ಸ್ ಎಂದರೇನು? ಈ ಸಾಂಕ್ಷೇಪಾಕ್ಷರಗಳು ಏನನ್ನು ಸೂಚಿಸುತ್ತವೆ? ಯಾರಾದರೂ ಎಚ್ಐವಿ ಹೊಂದಿದ್ದಾರೆಂದು ಕಂಡುಕೊಂಡಾಗ ಏನಾಗುತ್ತದೆ? ಯಾರಾದರೂ ಏಡ್ಸ್ ಅನ್ನು ಅಭಿವೃದ್ಧಿಪಡಿಸುವಾಗ ಏನಾಗುತ್ತದೆ? ಎಚ್ಐವಿ ಹೇಗೆ ವ್ಯಕ್ತಿಯಿಂದ ವ್ಯಕ್ತಿಗೆ ವರ್ಗಾವಣೆ ಆಗುತ್ತದೆ? ಅದು ಹೇಗೆ ಸಾಧ್ಯವಾಗುತ್ತದೆ? ನಾವು ಅದರಿಂದ ಹೇಗೆ ರಕ್ಷಿಸಿಕೊಳ್ಳಬಹುದು? ಜನರು ಎಚ್ಐವಿ ಪರೀಕ್ಷೆ ಮತ್ತು ಚಿಕಿತ್ಸೆಯನ್ನು ಹೇಗೆ ಪಡೆಯಬೇಕು? ತಾಯಂದಿರು ತಮ್ಮ ಮಗುವಿಗೆ ಎಚ್ಐವಿ ಹಾದುಹೋಗುವ ಅಪಾಯವನ್ನು ಕಡಿಮೆಗೊಳಿಸುವಲ್ಲಿ ಔಷಧಿಗಳನ್ನು ಹೇಗೆ ಸಹಾಯ ಮಾಡುತ್ತವೆ? ART (ಆಂಟಿ ರೆಟ್ರೋವೈರಲ್ ಥೆರಪಿ) ಹೇಗೆ ಕಾರ್ಯನಿರ್ವಹಿಸುತ್ತದೆ ಮತ್ತು ಯಾವಾಗ ಅದನ್ನು ತೆಗೆದುಕೊಳ್ಳಬೇಕು? ಯಾವಾಗ ನಮ್ಮ ಸ್ನೇಹವು ಲೈಂಗಿಕ ಸಂಬಂಧಗಳಾಗುತ್ತವೆ? ವ್ಯಕ್ತಿಯು ಕಾಂಡೋಮ್ ಅನ್ನು ಹೇಗೆ ಸರಿಯಾಗಿ ಬಳಸಬೇಕು? (ಪುರುಷ / ಹೆಣ್ಣು) ಎಚ್ಐವಿ ಜೊತೆ ವಾಸಿಸುವ ನಮ್ಮ ಸ್ನೇಹಿತರು ಮತ್ತು ಕುಟುಂಬವನ್ನು ಆರೋಗ್ಯಕರವಾಗಿಯೂ ಚೆನ್ನಾಗಿಯೂ ಉಳಿಸಿಕೊಳ್ಳಲು ಉತ್ತಮವಾದ ಮಾರ್ಗಗಳು ಯಾವುವು? ಎಚ್ಐವಿ ಮತ್ತು ಏಡ್ಸ್ ಜನರಿಗೆ ಸಹಾಯ ಮಾಡುವ ಹತ್ತಿರದ ಕ್ಲಿನಿಕ್ ಎಲ್ಲಿದೆ? ಎಂಬ ಪ್ರಶ್ನೆಗಳನ್ನು ಕೇಳಿ.

ದಿ ಲೈಫ್ಲೈನ್ ಗೇಮ್ ಅಥವಾ ಫ್ಲೀಟ್ ಆಫ್ ಹೋಪ್ ಗೇಮ್ ಕುರಿತು ನಿರ್ದಿಷ್ಟ ಮಾಹಿತಿಗಾಗಿ ಅಥವಾ ಟ್ರೂ ಅಥವಾ ಫಾಲ್ಸ್ ಗೇಮ್ ಉದಾಹರಣೆ ಗಾಗಿ ಅಥವಾ ಯಾವುದೆ ವಿಷಯದ ಕುರಿತು ನಿರ್ದಿಷ್ಟ ಮಾಹಿತಿಗಾಗಿ www.childrenforhealth.org ಅಥವಾ clare@childrenforhealth.org ಅನ್ನು ಸಂಪರ್ಕಿಸಿ.

ಕನ್ನಡ ಲಿಪಿ Home