ಕಲಿಕೆ ಮತ್ತು ಹಂಚಿಕೆಗೆ ಮಕ್ಕಳಿಗಾಗಿ 100 ಆರೋಗ್ಯ ಸಂದೇಶಗಳು ಸರಳವಾಗಿದ್ದು, ವಿಶ್ವಾಸಾರ್ಹ ಆರೋಗ್ಯ ಶಿಕ್ಷಣ ಸಂದೇಶಗಳು 8-14 ವರ್ಷಗಳ ನಡುವಿನ ಮಕ್ಕಳಿಗೆ ಉದ್ದೇಶಿತವಾಗಿವೆ. ಹಾಗಾಗಿ ಇದು 10-14 ವರ್ಷ ವಯಸ್ಸಿನ ನಡುವಿನ ತರುಣಾವಸ್ಥೆಯವರನ್ನು ಒಳಗೊಳ್ಳುತ್ತದೆ. 10-14 ವರ್ಷ ಪ್ರಾಯದ ತರುಣಾವಸ್ಥೆಯಲ್ಲಿರುವ ಮಕ್ಕಳಿಗೆ ಮಾಹಿತಿ ಒದಗಿಸುತ್ತದೆ ಎಂಬುದನ್ನು ಖಚಿತಪಡಿಸಿಕೊಳ್ಳುವುದು ವಿಶೇಷವಾಗಿ ಉಪಯುಕ್ತವೂ ಹಾಗು ಮುಖ್ಯವಾಗಿರುತ್ತದೆ ಎಂದು ನಾವು ಭಾವಿಸುತ್ತೇವೆ, ಏಕೆಂದರೆ ಈ ವಯಸ್ಸಿನ ಮಕ್ಕಳು ತಮ್ಮ ಕುಟುಂಬದ ಚಿಕ್ಕ ಮಕ್ಕಳ ಮೇಲೆ ಕಾಳಜಿ ವಹಿಸುವುದು ಸಹಜ. ಜೊತೆಗೆ, ಈ ರೀತಿಯಲ್ಲಿ ಅವರ ಕುಟುಂಬಗಳಿಗೆ ಸಹಾಯ ಮಾಡಲು ಅವರು ಮಾಡುತ್ತಿರುವ ಕೆಲಸವನ್ನು ಗುರುತಿಸುವುದು ಮತ್ತು ಮೆಚ್ಚಿಕೊಳ್ಳುವುದು ಮುಖ್ಯವಾಗಿರುತ್ತದೆ.

ಈ ನೂರು ಸಂದೇಶಗಳು ಮಲೇರಿಯಾ, ಭೇದಿ, ಪೌಷ್ಟಿಕತೆ, ಕೆಮ್ಮು-ಶೀತ-ಜ್ವರ, ಹೊಟ್ಟೆಯ ಹುಳುಗಳು, ನೀರು ಹಾಗೂ ಶುಚಿತ್ವ, ಪ್ರತಿರೋಧಕ ಲಸಿಕೆಗಳು, ಎಚ್ಐವಿ ಮತ್ತು ಏಡ್ಸ್, ಹಾಗೂ ಅಪಘಾತಗಳು, ಘಾಯ ಮತ್ತು ಮಕ್ಕಳ ಆರಂಭಿಕ ಬೆಳೆವಣಿಗೆಯಂತಹ ಹತ್ತು ಪ್ರಮುಖ ಆರೋಗ್ಯ ವಿಷಯಗಳಲ್ಲಿ ಪ್ರತಿಯೊಂದರ ಬಗ್ಗೆಯೂ ಹತ್ತು ಸಂದೇಶಗಳನ್ನು ಒಳಗೊಂಡಿವೆ. ಸರಳವಾದ ಈ ಸಂದೇಶಗಳು ಪೋಷಕರಿಗೆ, ಆರೋಗ್ಯ ಶಿಕ್ಷಕರಿಗೆ ಮಕ್ಕಳ ಜೊತೆ ಮನೆಯಲ್ಲಿ, ಶಾಲೆಗಳಲ್ಲಿ, ಕೂಟಗಳಲ್ಲಿ ಹಾಗೂ ಕ್ಲಿನಿಕ್ಕುಗಳಲ್ಲಿ ವ್ಯವಹರಿಸಲು ನೆರವಾಗುತ್ತವೆ.

ಇಲ್ಲಿ ವಿಷಯ 2 ರ ಬಗ್ಗೆ 10 ಸಂದೇಶಗಳಿವೆ: ಕೆಮ್ಮು, ಶೀತ ಮತ್ತು ಖಾಯಿಲೆ

 1. ಅಡಿಗೆ ಮಾಡುವುದರಿಂದಾಗಿ ಉಂಟಾಗುವ ಹೊಗೆಯು ಚಿಕ್ಕಪುಟ್ಟ ತುಣುಕುಗಳನ್ನು ಹೊಂದಿದ್ದು, ಅವುಗಳು ಶ್ವಾಸಕೋಶಗಳಿಗೆ ಹೋಗಬಹುದು ಮತ್ತು ರೋಗಕ್ಕೆsa,, picture of a person coughingಕಾರಣವಾಗಬಹುದು. ಹೊರಗೆ ಅಥವಾ ತಾಜಾ ಗಾಳಿಯು ಒಳಬರುವ ಮತ್ತು ಹೊಗೆಯು ಹೋಗಬಹುದಾದ ಸ್ಥಳದಲ್ಲಿ ಅಡಿಗೆ ಮಾಡುತ್ತಾ ಹೊಗೆ ಉಂಟಾಗುವುದನ್ನು ತಪ್ಪಿಸಿ.
 2. ಧೂಮಪಾನವು ಶ್ವಾಸಕೋಶಗಳನ್ನು ದುರ್ಬಲಗೊಳಿಸುತ್ತದೆ. ಬೇರೆಯವರ ಧೂಮಪಾನದಿಂದಾಗುವವಹೊಗೆಯನ್ನು ಉಸಿರಿಸುವುದೂ ಹಾನಿಕಾರಕವಾಗಿದೆ.
 3. ಪ್ರತಿಯೊಬ್ಬರಿಗೂ ಕೆಮ್ಮು ಮತ್ತು ಶೀತ ಆಗುತ್ತದೆ. ಹೆಚ್ಚಿನ ಜನರಿಗೆ ಬೇಗನೆ ಗುಣವಾಗುತ್ತದೆ. ಕೆಮ್ಮು ಅಥವಾ ಶೀತ 3 ವಾರಕ್ಕೂ ಹೆಚ್ಚು ಕಾಲ ಇದ್ದರೆ, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಿರಿ.
 4. ಬ್ಯಾಕ್ಟೀರಿಯಾ ಮತ್ತು ವೈರಸ್ ಎಂದು ಕರೆಯಲಾಗುವ ಹಲವು ಪ್ರಕಾರದ ಕೀಟಾಣುಗಳಿವೆ. ಕೆಮ್ಮು ಮತ್ತು ಶೀತಕ್ಕೆ ವೈರಸ್‌ಗಳು ಹೆಚ್ಚಿನ ಮಟ್ಟಿಗೆ ಕಾರಣವಾಗಿರುತ್ತವೆ ಮತ್ತು ಅವುಗಳನ್ನು ಔಷಧಗಳನ್ನು ಬಳಸಿ ಕೊಲ್ಲಲು ಸಾಧ್ಯವಿಲ್ಲ.
 5. ಶ್ವಾಸಕೋಶಗಳು ಉಸಿರಾಟಕ್ಕಾಗಿ ದೇಹದ ಮುಖ್ಯ ಭಾಗವಾಗಿವೆ. ಕೆಮ್ಮು ಮತ್ತು ಶೀತದಿಂದಾಗಿ ಶ್ವಾಸಕೋಶಗಳು ದುರ್ಬಲಗೊಳ್ಳುತ್ತವೆ. ನ್ಯುಮೊನಿಯಾ ಬ್ಯಾಕ್ಟೀರಿಯಾ ದುರ್ಬಲ ಶ್ವಾಸಕೋಶ ಉಳ್ಳವರಲ್ಲಿ ಗಂಭೀರ ರೋಗಗಳನ್ನು ಉಂಟು ಮಾಡುತ್ತದೆ.
 6. ನ್ಯುಮೊನಿಯಾದ ಚಿಹ್ನೆಯು (ಗಂಭೀರ ಖಾಯಿಲೆ) ವೇಗದ ಉಸಿರಾಟವಾಗಿರುತ್ತದೆ. ಉಸಿರಾಟವನ್ನು ಆಲಿಸಿ. ಎದೆಯು ಮೇಲೆ ಮತ್ತು ಕೆಳಗೆ ಹೋಗುತ್ತಿರುವುದನ್ನು ಗಮನಿಸಿ. ಇತರೆ ಚಿಹ್ನೆಗಳೆಂದರೆ, ಜ್ವರ, ಖಾಯಿಲೆ ಮತ್ತು ಎದೆನೋವುಗಳಾಗಿವೆ.
 7. ಒಂದು ನಿಮಿಷಕ್ಕೆ 60 ಅಥವಾ ಹೆಚ್ಚು ಬಾರಿ ಉಸಿರಾಡುವ 2 ತಿಂಗಳುಗಳಿಗಿಂತ ಕಡಿಮೆ ವಯಸ್ಸಿನ ಮಗುವನ್ನು ಬೇಗನೆ ಆರೋಗ್ಯ ಕಾರ್ಯಕರ್ತರ ಹತ್ತಿರ ಕರೆದೊಯ್ಯಿರಿ! 1-5 ವರ್ಷಗಳ ಪ್ರಾಯದ ಮಕ್ಕಳಲ್ಲಿ ವೇಗದ ಉಸಿರಾಟವು 20-30 ಕ್ಕೂ ಹೆಚ್ಚು ಬಾರಿ ಆಗಿರುತ್ತದೆ.
 8. ಉತ್ತಮ ಆಹಾರಕ್ರಮವು (ಮೊಲೆಹಾಲು ಕುಡಿಯುವ ಮಕ್ಕಳು), ಧೂಮಮುಕ್ತವಾದ ಮನೆ ಮತ್ತು ಪ್ರತಿರಕ್ಷಣೆಯು ನ್ಯುಮೊನಿಯಾದಂತಹ ಗಂಭೀರ ಖಾಯಿಲೆಗಳನ್ನು ತಡೆಯಲು ಸಹಾಯಕವಾಗುತ್ತದೆ.
 9. ಹೆಚ್ಚಾಗಿ ಬೆಚ್ಚಗಿರಿಸುವ, ರುಚಿಕರ ಪಾನೀಯಗಳನ್ನು ಕುಡಿಯುವ (ಸೂಪ್ ಮತ್ತು ಜ್ಯೂಸ್ ನಂತಹ), ನಿಮ್ಮ ಮೂಗನ್ನು ವಿಶ್ರಾಂತ ಮತ್ತು ಸ್ವಚ್ಛವಾಗಿರಿಕೊಳ್ಳುವ ಮೂಲಕ ಕೆಮ್ಮು ಅಥವಾ ಶೀತಕ್ಕೆ ಚಿಕಿತ್ಸೆ ನೀಡುಬಹುದು.
 10. ಕೆಮ್ಮು, ಶೀತ ಮತ್ತು ಇತರೆ ಖಾಯಿಲೆಗಳು ಒಬ್ಬರಿಂದ ಮತ್ತೊಬ್ಬರಿಗೆ ಹರಡುವುದರಿಂದ ತಡೆಯುವುದು. ಕೈಗಳು, ಆಹಾರದ ಮತ್ತು ಪಾನೀಯದ ಪಾತ್ರೆಗಳನ್ನು ಸ್ವಚ್ಛವಾಗಿರಿಸುವುದು, ಮತ್ತು ಬಾಯನ್ನು ಕಾಗದದಿಂದ ಮುಚ್ಚಿಕೊಂಡು ಕೆಮ್ಮುವುದು.

ಪರಿಣತ ಆರೋಗ್ಯ ಶಿಕ್ಷಕರು ಹಾಗೂ ತಜ್ಞ ವೈದ್ಯರುಗಳು ಪರಿಶೀಲಿಸಿರುವ ಈ ಆರೋಗ್ಯ ಸಂದೇಶಗಳು ಓ.ಆರ್.ಬಿ. ಯ ಆರೋಗ್ಯ ಕುರಿತ ವೆಬ್ ತಾಣ (http://www.health-orb.org) ದಲ್ಲಿಯೂ ಲಭ್ಯ.

ಈ ವಿಷಯದ ಬಗ್ಗೆ ಇನ್ನಷ್ಟು ಅರಿವು ಮೂಡಲು ಹಾಗೂ ಈ ಸಂದೇಶಗಳನ್ನು ಹಂಚಿಕೊಳ್ಳಲು ಮಕ್ಕಳಿಗೆ ನೆರವಾಗುವ ಕೆಲವು ಚಟುವಟಿಕೆಗಳು ಇಲ್ಲಿವೆ.

ಕೆಮ್ಮು, ಶೀತ ಮತ್ತು ಖಾಯಿಲೆ : ಮಕ್ಕಳು ಏನು ಮಾಡಬಹುದು?

 • ನಮ್ಮ ಸ್ವಂತ ಪದಗಳಲ್ಲಿ ಮತ್ತು ನಮ್ಮ ಸ್ವಂತ ಭಾಷೆಯಲ್ಲಿ ಕೆಮ್ಮು, ಶೀತ ಮತ್ತು ಖಾಯಿಲೆಯ ಬಗ್ಗೆ ನಮ್ಮದೇ ಆದ ಸ್ವಂತ ಸಂದೇಶಗಳನ್ನು ರಚಿಸುವುದು!
 • ನಾವು ಸಂದೇಶಗಳನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲದಂತೆ ಆಗಾಗ ಅವುಗಳನ್ನು ನೆನಪಿಸಿಕೊಳ್ಳುವುದು!
 • ಬೇರೆ ಮಕ್ಕಳು ಮತ್ತು ನಮ್ಮ ಕುಟುಂಬದ ಸದಸ್ಯರೊಂದಿಗೆ ಸಂದೇಶಗಳನ್ನು ಹಂಚಿಕೊಳ್ಳುವುದು!
 • ನಿಮ್ಮ ಮನೆಯಲ್ಲಿ ಎಲ್ಲಿ ಹೊಗೆಯಿದೆ, ಎಲ್ಲಿ ಹೊಗೆ ಇರುವುದಿಲ್ಲ? ಮಕ್ಕಳು ಹೊಗೆಯಿಂದ ಮುಕ್ತವಾದ ಯಾವ ಜಾಗದಲ್ಲಿ ಸುರಕ್ಷಿತವಾಗಿ ಆಟವಾಡಬಹುದು? ಎಂಬ ಬಗ್ಗೆ ಯೋಜನೆ ಮಾಡಿಕೊಳ್ಳುವುದು.
 • ದಡಾರ ಮತ್ತು ನಾಯಿಕೆಮ್ಮುಗಳಂತಹ ಅಪಾಯಕಾರಿ ರೋಗಗಳ ವಿರುದ್ದ ತಮ್ಮ ಮಕ್ಕಳು ಪ್ರತಿರಕ್ಷಣೆ ಪಡೆಯಲು ಪೋಷಕರನ್ನು ಪ್ರೋತ್ಸಾಹಿಸುವುದಕ್ಕಾಗಿ ಒಂದು ಪೋಸ್ಟರ್ ಮಾಡುವುದು.
 • ನ್ಯುಮೊನಿಯಾ ಬಗ್ಗೆ ಒಂದು ಹಾಡು ರಚಿಸುವುದು ಮತ್ತು ಅದನ್ನು ನಮ್ಮ ಕುಟುಂಬ ಮತ್ತು ಸ್ನೇಹಿತರೊಂದಿಗೆ ಹಂಚಿಕೊಳ್ಳುವುದು.
 • ಉಸಿರಾಟವು ವೇಗವಾಗಿರುವಾಗ ಮತ್ತು ಉಸಿರಾಟವು ಸಾಮಾನ್ಯವಾಗಿರುವಾಗ ಎಣಿಕೆ ಮಾಡಲು ನಮಗೆ ಸಹಾಯಕವಾಗುವಂತೆ ಸ್ಟ್ರಿಂಗ್ ಮತ್ತು ಸ್ಟೊನ್ ಜೊತೆ ಪೆಂಡುಲಮ್ ಮಾಡುವುದು, ಮತ್ತು ನಾವು ನಮ್ಮ ಕುಟುಂಬಕ್ಕೆ ಏನನ್ನು ಕಲಿತೆವು ಎಂಬುದನ್ನು ತೋರಿಸುವುದು.
 • ಮೊಲೆಹಾಲುಣ್ಣುವ ಮಕ್ಕಳ ಬಗ್ಗೆ ನಮ್ಮ ಸ್ವಂತ ನಾಟಕವನ್ನು ರಚಿಸುವುದು.
 • ಜ್ವರ ಇರುವಾಗ ತಣ್ಣಗಾಗಿಸುವುದು ಮತ್ತು ಶೀತವಿರುವಾಗ ಬೆಚ್ಚಗಿರುವ ಬಗ್ಗೆ ನಾಟಕವನ್ನು ರಚಿಸುವುದು.
 • ಊಟ ಮಾಡುವ ಮುಂಚೆ ಮತ್ತು ಶೌಚಾಲಯವನ್ನು ಬಳಸಿದ ನಂತರ ಸಾಬೂನನ್ನು ಬಳಸಿ ನಮ್ಮ ಕೈಗಳನ್ನು ತೊಳೆದುಕೊಳ್ಳಲು ಸಹಾಯಕವಾಗಲು ಮನೆ ಮತ್ತು ಶಾಲೆಯಲ್ಲಿ ಟಿಪ್ಪಿ ಟ್ಯಾಪ್ ಮಾಡುವುದು.
 • ಕೀಟಾಣುಗಳು ಹರಡುವುದನ್ನು ತಡೆಯಲು, ಮತ್ತು ಕೆಮ್ಮು ಹಾಗೂ ಶೀತದ ವಿರುದ್ದ ನಿಮ್ಮನ್ನು ರಕ್ಷಿಸಿಕೊಳ್ಳಲು ಸಾಬೂನು ಮತ್ತು ನೀರಿನೊಂದಿಗೆ ನಿಮ್ಮ ಕೈಗಳನ್ನು ತೊಳೆದುಕೊಳ್ಳುವುದು ಹೇಗೆ ಎಂಬುದನ್ನು ಕಲಿಯುವುದು.
 • ನ್ಯುಮೊನಿಯ ಅಥವಾ ಶೀತ ಆಗಿರಬಹುದಾದ ವಿಭಿನ್ನ ಚಿತ್ರಣಗಳನ್ನು ಅಭಿನಯಿಸುವ ಮೂಲಕ ನ್ಯುಮೊನಿಯಾ ಬಗ್ಗೆ ನಮ್ಮ ಜ್ಞಾನವನ್ನು ಪರೀಕ್ಷಿಸಿಕೊಳ್ಳುವುದು.
 • ನ್ಯುಮೊನಿಯಾದ ಅಪಾಯಕಾರಿ ಚಿಹ್ನೆಗಳು ಯಾವುವು ಎಂಬುದನ್ನು ಕೇಳುವುದು? ನಾವು ನಮ್ಮ ಏನನ್ನು ಕಲಿತೆವೊ ಅದನ್ನು ಕುಟುಂಬದೊಂದಿಗೆ ಹಂಚಿಕೊಳ್ಳುವುದು.
 • ಧೂಮಪಾನವನ್ನು ಎಲ್ಲಿ ನಿಷೇಧಿಸಲಾಗಿದೆ ಕೇಳಿರಿ? ನಿಮ್ಮ ಶಾಲೆಯು ಧೂಮಪಾನ ಮುಕ್ತವಾಗಿದೆಯೆ?
 • ನಾವು ವೇಗವಾಗಿ ಉಸಿರಾಡುವಂತೆ ಮಾಡುವುದು ಯಾವುದು ಕೇಳಿರಿ? ಬೇರೊಬ್ಬರು ನ್ಯುಮೊನಿಯಾದಿಂದಾಗಿ ಅಪಾಯದಲ್ಲಿರುವಾಗ ವೇಗವಾಗಿ ಉಸಿರಾಡುವುದನ್ನು ಗುರುತಿಸಲು ನಮ್ಮ ಉಸಿರಾಟವನ್ನು ಮಾಪನ ಮಾಡಬಹುದು.
 • ಕೆಮ್ಮು ಮತ್ತು ಶೀತಕ್ಕೆ ಚಿಕಿತ್ಸೆ ನೀಡಲು ಹೊಸ ಮತ್ತು ಹಳೆಯ ವಿಧಾನಗಳು ಯಾವುವು ಕೇಳಿರಿ?
 • ಕೀಟಾಣುಗಳು ಹೇಗೆ ಹರಡುತ್ತವೆ ಎಂದು ಕೇಳಿರಿ? ಕೈಕುಲುಕುವ ಆಟವನ್ನು ಆಡುವ ಮೂಲಕ ಕಲಿಯಿರಿ.

ಟಿಪ್ಪಿ ಟ್ಯಾಪ್, ಪೆಂಡುಲಮ್ ಅಥವಾ ಹ್ಯಾಂಡ್ ಶೇಕಿಂಗ್ ಗೇಮ್ ಬಗ್ಗೆ ಹೆಚ್ಚಿನ ಮಾಹಿತಿಗಾಗಿ, ಅಥವಾ ಯಾವುದೇ ಇತರೆ ಮಾಹಿತಿಗಾಗಿ, ದಯವಿಟ್ಟು www.childrenforhealth.org ಅಥವಾ email us ಅನ್ನು ಸಂಪರ್ಕಿಸಿ.

ಕನ್ನಡ ಲಿಪಿ Home