ಕಲಿಕೆ ಮತ್ತು ಹಂಚಿಕೆಗೆ ಮಕ್ಕಳಿಗಾಗಿ 100 ಆರೋಗ್ಯ ಸಂದೇಶಗಳು ಸರಳವಾಗಿದ್ದು, ವಿಶ್ವಾಸಾರ್ಹ ಆರೋಗ್ಯ ಶಿಕ್ಷಣ ಸಂದೇಶಗಳು 8-14 ವರ್ಷಗಳ ನಡುವಿನ ಮಕ್ಕಳಿಗೆ ಉದ್ದೇಶಿತವಾಗಿವೆ. ಹಾಗಾಗಿ ಇದು 10-14 ವರ್ಷ ವಯಸ್ಸಿನ ನಡುವಿನ ತರುಣಾವಸ್ಥೆಯವರನ್ನು ಒಳಗೊಳ್ಳುತ್ತದೆ. 10-14 ವರ್ಷ ಪ್ರಾಯದ ತರುಣಾವಸ್ಥೆಯಲ್ಲಿರುವ ಮಕ್ಕಳಿಗೆ ಮಾಹಿತಿ ಒದಗಿಸುತ್ತದೆ ಎಂಬುದನ್ನು ಖಚಿತಪಡಿಸಿಕೊಳ್ಳುವುದು ವಿಶೇಷವಾಗಿ ಉಪಯುಕ್ತವೂ ಹಾಗು ಮುಖ್ಯವಾಗಿರುತ್ತದೆ ಎಂದು ನಾವು ಭಾವಿಸುತ್ತೇವೆ, ಏಕೆಂದರೆ ಈ ವಯಸ್ಸಿನ ಮಕ್ಕಳು ತಮ್ಮ ಕುಟುಂಬದ ಚಿಕ್ಕ ಮಕ್ಕಳ ಮೇಲೆ ಕಾಳಜಿ ವಹಿಸುವುದು ಸಹಜ. ಜೊತೆಗೆ, ಈ ರೀತಿಯಲ್ಲಿ ಅವರ ಕುಟುಂಬಗಳಿಗೆ ಸಹಾಯ ಮಾಡಲು ಅವರು ಮಾಡುತ್ತಿರುವ ಕೆಲಸವನ್ನು ಗುರುತಿಸುವುದು ಮತ್ತು ಮೆಚ್ಚಿಕೊಳ್ಳುವುದು ಮುಖ್ಯವಾಗಿರುತ್ತದೆ.

ಈ ನೂರು ಸಂದೇಶಗಳು ಮಲೇರಿಯಾ, ಭೇದಿ, ಪೌಷ್ಟಿಕತೆ, ಕೆಮ್ಮು-ಶೀತ-ಜ್ವರ, ಹೊಟ್ಟೆಯ ಹುಳುಗಳು, ನೀರು ಹಾಗೂ ಶುಚಿತ್ವ, ಪ್ರತಿರೋಧಕ ಲಸಿಕೆಗಳು, ಎಚ್ಐವಿ ಮತ್ತು ಏಡ್ಸ್, ಹಾಗೂ ಅಪಘಾತಗಳು, ಘಾಯ ಮತ್ತು ಮಕ್ಕಳ ಆರಂಭಿಕ ಬೆಳೆವಣಿಗೆಯಂತಹ ಹತ್ತು ಪ್ರಮುಖ ಆರೋಗ್ಯ ವಿಷಯಗಳಲ್ಲಿ ಪ್ರತಿಯೊಂದರ ಬಗ್ಗೆಯೂ ಹತ್ತು ಸಂದೇಶಗಳನ್ನು ಒಳಗೊಂಡಿವೆ. ಸರಳವಾದ ಈ ಸಂದೇಶಗಳು ಪೋಷಕರಿಗೆ, ಆರೋಗ್ಯ ಶಿಕ್ಷಕರಿಗೆ ಮಕ್ಕಳ ಜೊತೆ ಮನೆಯಲ್ಲಿ, ಶಾಲೆಗಳಲ್ಲಿ, ಕೂಟಗಳಲ್ಲಿ ಹಾಗೂ ಕ್ಲಿನಿಕ್ಕುಗಳಲ್ಲಿ ವ್ಯವಹರಿಸಲು ನೆರವಾಗುತ್ತವೆ.

ವಿಷಯ 7ರ ಮೇಲಿನ 10 ಸಂದೇಶಗಳು ಇಲ್ಲಿವೆ: ಪೌಷ್ಟಿಕಾಂಶ

 1. ನಾವು ಶಕ್ತಿವಂತರಾಗುವಂತೆ ಹಾಗು ಬೆಳೆಯುವಂತೆ ಮಾಡುವ ಆಹಾರ ಹಾಗು ನಾವು ಕಾಂತಿಯುತರಾಗುವಂತೆ ಮಾಡುವ ಆಹಾರ, ಒಳ್ಳೆಯ ಆಹಾರವಾಗಿರುತ್ತದೆ, ಅದು ನಮ್ಮನ್ನು ಬಲಶಾಲಿಗಳನ್ನಾಗಿ ಮಾಡುತ್ತದೆ!
 2. ಅಪೌಷ್ಟಿಕತೆಗೆ ಕಾರಣ ಅತೀ ಕಡಿಮೆ ತಿನ್ನುವುದು ಅಥವಾ ಅತಿಯಾದ ಕುರುಕು ತಿಂಡಿಗಳನ್ನು ತಿನ್ನುವುದು ಆಗಿರಬಹುದು. ಊಟದ ಸಮಯದಲ್ಲಿ ಒಳ್ಳೆಯ ಆಹಾರವನ್ನು ಬೇರೆಯವರೊಂದಿಗೆ ಹಂಚಿಕೊಂಡು, ಸರಿಯಾದ ಪ್ರಮಾಣದಲ್ಲಿ ತಿನ್ನುವುದರಿಂದ ಇದನ್ನು ತಪ್ಪಿಸಬಹುದು.
 3. 2 ವರ್ಷಗಳಿಗಿಂತ ಕಡಿಮೆ ವಯಸ್ಸಿನ ಮಕ್ಕಳು ಚೆನ್ನಾಗಿ ಬೆಳೆಯುತ್ತಿದ್ದಾರೆಯೇ ಎಂದು ಪರಿಶೀಲಿಸಲು ಅವರ ತೂಕವನ್ನು ಪ್ರತಿ ತಿಂಗಳು 5 ವರ್ಷಕ್ಕಿಂತ ಕಡಿಮೆಯ ಮಕ್ಕಳಿಗಾಗಿನ ಚಿಕಿತ್ಸಾಲಯದಲ್ಲಿ ಪರೀಕ್ಷಿಸಬೇಕಾಗುತ್ತದೆ.
 4. ಮಕ್ಕಳು ಅತಿಯಾಗಿ ಸಣಕಲಾದರೆ ಅಥವಾ ಅವರ ಮುಖ ಅಥವಾ ಪಾದ ಊದಿಕೊಂಡರೆ ಅಥವಾ ಅತಿಯಾಗಿ ಸುಮ್ಮನಿದ್ದರೆ, ಅವರು ಆರೋಗ್ಯ ಕಾರ್ಯಕರ್ತರನ್ನು ನೋಡಬೇಕು.
 5. ಮಕ್ಕಳಿಗೆ ಕಾಯಿಲೆಯಾದರೆ ಹಸಿವೆ ಕಡಿಮೆಯಾಗಬಹುದು. ಅವರಿಗೆ ಕುಡಿಯಲು ಬಹಳಷ್ಟು ಪಾನೀಯ ಮತ್ತು ಸೂಪ್ ಅನ್ನು ನೀಡಿ ಹಾಗು ಗುಣಮುಖರಾಗುವಾಗ ಎಂದಿಗಿಂತ ಹೆಚ್ಚಿನ ಆಹಾರವನ್ನು ನೀಡಿ.
 6. ಶಿಶುವು ಹುಟ್ಟಿದ ನಂತರ 6 ತಿಂಗಳವರೆಗೆ ಅದಕ್ಕೆ ಬೇಕಾಗುವ ಒಂದೇ ಒಂದು ಆಹಾರವೆಂದರೆ ಅದು ತಾಯಿಯ ಎದೆಹಾಲು. ಅದರಲ್ಲಿ ಶಕ್ತಿ, ಬೆಳವಣಿಗೆ ಮತ್ತು ಕಾಂತಿ ಎಲ್ಲವೂ ಇದೆ!
 7. 6 ತಿಂಗಳ ನಂತರ ಶಿಶುಗಳಿಗೆ ತಾಯಿಯ ಎದೆಹಾಲು ಮತ್ತು ಚೆನ್ನಾಗಿ ಕಲಸಿದ ಅಥವಾ ಮೆತ್ತಗೆ ಮಾಡಿದ ಕುಟುಂಬದ ಆಹಾರ, ದಿನಕ್ಕೆ 3ರಿಂದ 4 ಬಾರಿ ಹಾಗು ಪ್ರತಿ ಊಟದ ನಡುವೆ ಏನಾದರೂ ತಿಂಡಿ ಅಗತ್ಯವಾಗುತ್ತದೆ.
 8. ಬೇರೆಬೇರೆ ಬಣ್ಣದ ಪ್ರಾಕೃತಿಕ ಆಹಾರಗಳನ್ನು ಪ್ರತಿ ವಾರ ಸೇವಿಸುವುದು ಆರೋಗ್ಯಪೂರ್ಣ, ಸಂತುಲಿತ ಆಹಾರಕ್ರಮಕ್ಕೆ ಅತ್ಯುತ್ತಮ ಮಾರ್ಗ.
 9. ಕೆಂಪು, ಹಳದಿ ಮತ್ತು ಹಸಿರು ಹಣ್ಣುಗಳು ಮತ್ತು ತರಕಾರಿಗಳಲ್ಲಿ ಸೂಕ್ಷ್ಮಪೌಷ್ಟಿಕಾಂಶಗಳು ಸಮೃದ್ಧವಾಗಿರುತ್ತವೆ. ಇವುಗಳು ಕಣ್ಣಿಗೆ ಕಾಣದಷ್ಟು ಚಿಕ್ಕದಾಗಿರುತ್ತವೆ, ಆದರೆ ನಮ್ಮ ದೇಹವನ್ನು ಬಲಶಾಲಿಯನ್ನಾಗಿಸುತ್ತವೆ.
 10. ನೀವು ತಿನ್ನುವಂತಹ ಮತ್ತು ಅಡುಗೆ ಮಾಡುವಂತಹ ಆಹಾರ ಪದಾರ್ಥವನ್ನು ತೊಳೆಯುವ ಮೂಲಕ ಕಾಯಿಲೆ ಮತ್ತು ದುಃಖವನ್ನು ದೂರವಿರಿಸಿ. ಬೇಯಿಸಿದ ಆಹಾರವನ್ನು ಕೂಡಲೇ ತಿನ್ನಿ ಅಥವಾ ಅದನ್ನು ಸರಿಯಾಗಿ ಶೇಖರಿಸಿಡಿ.

ಪರಿಣತ ಆರೋಗ್ಯ ಶಿಕ್ಷಕರು ಹಾಗೂ ತಜ್ಞ ವೈದ್ಯರುಗಳು ಪರಿಶೀಲಿಸಿರುವ ಈ ಆರೋಗ್ಯ ಸಂದೇಶಗಳು ಓ.ಆರ್.ಬಿ. ಯ ಆರೋಗ್ಯ ಕುರಿತ ವೆಬ್ ತಾಣ (http://www.health-orb.org) ದಲ್ಲಿಯೂ ಲಭ್ಯ.

ಈ ವಿಷಯದ ಬಗ್ಗೆ ಇನ್ನಷ್ಟು ಅರಿವು ಮೂಡಲು ಹಾಗೂ ಈ ಸಂದೇಶಗಳನ್ನು ಹಂಚಿಕೊಳ್ಳಲು ಮಕ್ಕಳಿಗೆ ನೆರವಾಗುವ ಕೆಲವು ಚಟುವಟಿಕೆಗಳು ಇಲ್ಲಿವೆ.

ಪೌಷ್ಟಿಕಾಂಶ: ಮಕ್ಕಳು ಏನು ಮಾಡಬಹುದು?

 • ನಮ್ಮದೇ ಭಾಷೆಯಲ್ಲಿ ನಮ್ಮದೇ ಸ್ವಂತ ಪದಗಳನ್ನು ಬಳಸುತ್ತಾ ನಮ್ಮದೇ ಸ್ವಂತ ನೀರು ಮತ್ತು ನೈರ್ಮಲ್ಯದ ಸಂದೇಶಗಳನ್ನು ಸಿದ್ಧಪಡಿಸಿ!
 • ಈ ಸಂದೇಶಗಳು ಮರೆತು ಹೋಗದ ಹಾಗೆ ಬಾಯಿಪಾಠ ಮಾಡುವುದು!
 • ನಮ್ಮ ಮನೆಮಂದಿ ಹಾಗೂ ಇತರೆ ಮಕ್ಕಳ ಜೊತೆಗೆ ಈ ಸಂದೇಶಗಳನ್ನು ಹಂಚಿಕೊಳ್ಳುವುದು
 • ಬೆಳವಣಿಗೆ ಚಾರ್ಟ್ ಅನ್ನು ಪತ್ತೆ ಮಾಡಿ ಅದನ್ನು ನೋಡಿ, ವಯಸ್ಕರೊಬ್ಬರ ಸಹಾಯದಿಂದ ಬೇರೆ ಮಕ್ಕಳೊಡನೆ ಸೇರಿ ಅದರಲ್ಲಿರುವ ಎಲ್ಲಾ ಗೆರೆಗಳ ಅರ್ಥವೇನು ಎಂಬುದನ್ನು ತಿಳಿದುಕೊಳ್ಳಿ. ಕೆಲವು ಕಡೆಗಳಲ್ಲಿ ಇದನ್ನು ರೋಡ್ ಟು ಹೆಲ್ತ್ ಚಾರ್ಟ್ ಎಂದು ಕರೆಯುತ್ತಾರೆ ಮತ್ತು ಆರೋಗ್ಯ ಚಿಕಿತ್ಸಾಲಯದಲ್ಲಿ ಇದನ್ನು ಕಾಣಬಹುದು.
 • ಆರೋಗ್ಯ ಚಿಕಿತ್ಸಾಲಯಕ್ಕೆ ಹೋಗಿ ಮತ್ತು ಅಲ್ಲಿ ಮಕ್ಕಳನ್ನು ತೂಕ ಮಾಡುವುದನ್ನು ಹಾಗು ಅವರ ತೂಕವನ್ನು ಬೆಳವಣಿಗೆ ಚಾರ್ಟಿನಲ್ಲಿ ಗುರುತಿಸುವುದನ್ನು ಗಮನಿಸಿ.
 • ಆರೋಗ್ಯ ಚಿಕಿತ್ಸಾಲಯದಲ್ಲಿ ಶಿಶುಗಳನ್ನು ಹಾಗು ಚಿಕ್ಕ ಮಕ್ಕಳ ತೂಕ ಮತ್ತು ಅಳತೆ ಮಾಡುವುದನ್ನು ವೀಕ್ಷಿಸಿ.
 • ಅಪೌಷ್ಟಿಕತೆಯನ್ನು ಹೊಂದಿರುವ ಅಥವಾ ಹೊಂದಿರಬಹುದಾದ ಯಾರಾದರೂ ಮಕ್ಕಳು ಅವರಿಗೆ ತಿಳಿದಿದ್ದಾರೆಯೇ ಮತ್ತು ಅಂತಹ ಮಕ್ಕಳಿಗೆ ಸಹಾಯ ಮಾಡಲು ಅವರು ಏನು ಮಾಡಬಹುದು ಎಂಬುದನ್ನು ಚರ್ಚಿಸಿ.
 • ಪ್ರತಿ ದಿನ/ಪ್ರತಿ ವಾರ ನನ್ನ ಕುಟುಂಬ ಏನನ್ನು ತಿನ್ನುತ್ತದೆ? ಪ್ರತಿ ವಾರ ನಾವು ಎಷ್ಟು ಪ್ರಾಕೃತಿಕ ಬಣ್ಣಗಳನ್ನು ಸೇವಿಸುತ್ತೇವೆ? ನಮ್ಮ ಕುಟುಂಬದಲ್ಲಿ ಪ್ರತಿಯೊಬ್ಬರೂ ತಮ್ಮ ಬೆಳವಣಿಗೆಗೆ ಅಗತ್ಯವಿರುವಷ್ಟು, ಕಾಂತಿಯುತರಾಗುವಷ್ಟು ಹಾಗು ಶಕ್ತಿಶಾಲಿಯಾಗುವಷ್ಟು ಆಹಾರವನ್ನು ಪಡೆಯುತ್ತಿದ್ದಾರೆಯೇ? ವಿಶೇಷವಾಗಿ ಯಾರಾದರೂ ವಯಸ್ಸಾದವರು ಅಥವಾ ವಿಶೇಷವಾಗಿ ಯಾರಾದರೂ ಚಿಕ್ಕ ವಯಸ್ಸಿನವರು ತೀರಾ ಕಡಿಮೆ ಆಹಾರ ಸೇವಿಸುತ್ತಿದ್ದು, ಅದರ ಕಡೆ ಗಮನ ಕೊಡಬೇಕಾಗಿದೆಯೇ? ಎಂಬುದನ್ನು ದಾಖಲಿಸಿ.
 • ಆಹಾರದ ಕಾರಣ ಜನರು ಅನಾರೋಗ್ಯಕ್ಕೆ ಒಳಗಾದ ಕಥೆಗಳ ಬಗ್ಗೆ ಕೇಳಿ ತಿಳಿದುಕೊಳ್ಳಿ.
 • ಒಂದು ಮಗುವು ಅಪೌಷ್ಟಿಕವಾಗಿದೆ ಎಂಬುದು ಪೋಷಕರು, ಆರೋಗ್ಯ ಕಾರ್ಯಕರ್ತರು ಅಥವಾ ಬೇರೆಯವರು ಹೇಗೆ ಗುರುತಿಸುತ್ತಾರೆ ಎಂಬುದನ್ನು ಅವರನ್ನೇ ಕೇಳಿ ತಿಳಿದುಕೊಳ್ಳಿ.
 • ಶಿಶುಗಳಿಗೆ ಮತ್ತು ಚಿಕ್ಕ ಮಕ್ಕಳಿಗೆ ಕೆಟ್ಟದಾಗುವ ಆಹಾರವನ್ನು ತೋರಿಸುವ ಚಿತ್ರಮಯ ಚಾರ್ಟ್ ರಚಿಸಿ ಮತ್ತು ಪ್ರತಿಯೊಂದು ಆಹಾರದ ಪಕ್ಕದಲ್ಲಿ ಅದು ಏಕೆ ಕೆಟ್ಟದು ಎಂಬುದನ್ನು ಬರೆಯಿರಿ.
 • ತಾಯಂದಿರು ತಮ್ಮ ಮಕ್ಕಳಿಗೆ 6 ತಿಂಗಳುಗಳ ನಂತರ ಮೊದಲ ಆಹಾರವಾಗಿ ತಿನ್ನಲು ಏನನ್ನು ನೀಡುತ್ತಾರೆ ಎಂಬುದನ್ನು ತಿಳಿಯಿರಿ? ಅವರು ತಮ್ಮ ಮಕ್ಕಳಿಗೆ ಎಷ್ಟು ಸಾರಿ ತಿನ್ನಿಸುತ್ತಾರೆ? ನೀವು ಉತ್ತರಗಳನ್ನು ದಾಖಲಿಸಿಕೊಂಡು ನಂತರ ಫಲಿತಾಂಶಗಳನ್ನು ತೋರಿಸುವಂತಹ ಒಂದು ಚಾರ್ಟ್ ಅನ್ನು ಸ್ನೇಹಿತರೊಂದಿಗೆ ಸಿದ್ಧಪಡಿಸಬಹುದು.
 • ಸಮುದಾಯದಲ್ಲಿನ ಬಹಳಷ್ಟು ಜನರಿಗೆ ಯಾವೆಲ್ಲಾ ವಿಟಮಿನ್ ಸಮೃದ್ಧ ಆಹಾರಗಳು ಲಭ್ಯವಿವೆ ಮತ್ತು ಈ ಆಹಾರಗಳನ್ನು ಹೇಗೆ ಸಿದ್ಧಪಡಿಸಲಾಗುತ್ತದೆ (ಮಾರುಕಟ್ಟೆ ಮತ್ತು/ಅಥವಾ ಮನೆಯಲ್ಲಿ) ಎಂಬುದನ್ನು ತಿಳಿಯಿರಿ.
 • ಆಹಾರವನ್ನು ಹೇಗೆ ತಯಾರಿಸಲಾಗುತ್ತದೆ, ತಟ್ಟೆಗಳು ಮತ್ತು ಪಾತ್ರೆಗಳನ್ನು ಹೇಗೆ ತೊಳೆಯಲಾಗುತ್ತದೆ ಹಾಗು ಒಣಗಿಸಲಾಗುತ್ತದೆ ಮತ್ತು ಅಡುಗೆ ತಯಾರಿಸುವ ವ್ಯಕ್ತಿ ಕೈ ತೊಳೆಯುತ್ತಾರೆಯೇ ಹಾಗು ಸರಿಯಾಗಿ ಕೈ ತೊಳೆಯುತ್ತಾರೆಯೇ ಎಂಬುದನ್ನು ಗಮನಿಸಿ.
 • ಒಂದು ವಾರದ ಸಮಯದಲ್ಲಿ ನಾವು ಪ್ರತಿ ದಿನ ತಿನ್ನುವಂತಹ ಆಹಾರದ ಬಗ್ಗೆ ಚಿತ್ರಗಳನ್ನು ರಚಿಸಿ ಮತ್ತು/ಅಥವಾ ಅವುಗಳ ಬಗ್ಗೆ ಬರೆಯಿರಿ. ಚಿತ್ರಗಳಿಗೆ ನಾವು ಬಣ್ಣ ಹಚ್ಚಬಹುದು ಅಥವಾ ಎಲ್ಲಾ ಆಹಾರಕ್ಕೂ ಬಣ್ಣದ ಲೇಬಲ್‌ಗಳನ್ನು ಬರೆಯಬಹುದು.
 • ತಾಯಂದಿರು ತಮ್ಮ ಶಿಶುಗಳಿಗೆ ಮೊದಲ ಆಹಾರವಾಗಿ ಹಾಗು 6 ತಿಂಗಳುಗಳ ನಂತರ ತಿನ್ನಲು ಏನನ್ನು ನೀಡುತ್ತಾರೆ ಎಂಬುದನ್ನು ತಿಳಿಯಿರಿ ಮತ್ತು ಉತ್ತರಗಳನ್ನು ದಾಖಲಿಸಿಕೊಳ್ಳಿ ಹಾಗು ನಂತರ ಫಲಿತಾಂಶಗಳನ್ನು ತೋರಿಸುವ ಚಾರ್ಟ್ ಅನ್ನು ಸ್ನೇಹಿತರೊಂದಿಗೆ ಸೇರಿ ತಯಾರಿಸಿ.
 • ಶಿಶುಗಳಿಗೆ ಮತ್ತು ಚಿಕ್ಕ ಮಕ್ಕಳಿಗೆ ಯಾವ ಆಹಾರ ಒಳ್ಳೆಯದು ಅಥವಾ ಕೆಟ್ಟದು ಎಂಬುದರ ಬಗ್ಗೆ ಕಲಿಯಿರಿ. ನೀವು ಈ ಆಹಾರದ ಚಿತ್ರಗಳನ್ನು ರಚಿಸಬಹುದು ಹಾಗು ಫಲಿತಾಂಶಗಳನ್ನು ತೋರಿಸುವ ಚಿತ್ರದ ಚಾರ್ಟ್ ಅನ್ನು ಸಿದ್ಧಪಡಿಸಬಹುದು.
 • ಒಂದು ಶಿಶು ಚೆನ್ನಾಗಿ ಬೆಳೆಯುತ್ತಿದೆಯೇ ಎಂಬುದನ್ನು ಪರಿಶೀಲಿಸುವಲ್ಲಿ ಬೆಳವಣಿಗೆ ಚಾರ್ಟ್ ಹೇಗೆ ಕೆಲಸ ಮಾಡುತ್ತದೆ? ಆಹಾರವನ್ನು ಒಣಗಿಸಲು ಅಥವಾ ಶೇಖರಿಸಲು ಯಾವ ವಿಧಾನವನ್ನು ಬಳಸಲಾಗುತ್ತದೆ ಅಥವಾ ಆಹಾರವನ್ನು ತಾಜಾ ಆಗಿರಿಸಲು ಬಳಸಲಾಗುವ ಇತರ ವಿಧಾನಗಳೇನು? ಪ್ರಾಕೃತಿಕ ಬಣ್ಣಗಳನ್ನೊಳಗೊಂಡ ಆಹಾರವನ್ನು ತಿನ್ನುವುದು ಏಕೆ ಮುಖ್ಯವಾದುದು? ಜನರಿಗೆ ಕಾಯಿಲೆಯಾದಾಗ ಹಾಗು ಆ ನಂತರದ ಸಮಯದಲ್ಲಿ ಯಾವೆಲ್ಲಾ ಆಹಾರ ತಿಂದರೆ ಒಳ್ಳೆಯದು ಎಂಬುದನ್ನು ಕೇಳಿ.
 • ಎದೆಹಾಲು ಕುಡಿಸುವಿಕೆಯ ಬಗ್ಗೆ ಮತ್ತು ಅದು ಅತ್ಯುತ್ತಮ ಆಯ್ಕೆ ಏಕೆ ಎಂಬುದಕ್ಕೆ ಕಾರಣಗಳನ್ನು ಆರೋಗ್ಯ ಕಾರ್ಯಕರ್ತರಿಂದ ತಿಳಿಯಿರಿ.
 • ಕಾಯಿಲೆಯಾಗಿರುವ ಒಂದು ಮಗು ಸಾಕಷ್ಟು ಆಹಾರ ಮತ್ತು ಪಾನೀಯ ಪಡೆಯಲು ಸಹಾಯ ಮಾಡಲು ನಾವು ಏನು ಮಾಡಬಹುದು ಎಂದು ಕೇಳಿ?
 • ನಮ್ಮ ಸಮುದಾಯದಲ್ಲಿ/ ನಮ್ಮ ಸ್ನೇಹಿತರ ಪೈಕಿ ಯಾವ ತಾಯಂದಿರು ತಮ್ಮ ಮಕ್ಕಳಿಗೆ ಎದೆಹಾಲನ್ನು ನೀಡಿದ್ದಾರೆ ಮತ್ತು ಏಕೆ ಎಂಬುದನ್ನು ತಿಳಿಯಿರಿ. ಮಗು ದೊಡ್ಡದಾದಂತೆಲ್ಲಾ ಹೇಗೆ ಎದೆಹಾಲು ಬದಲಾಗುತ್ತದೆ? ಮಗುವಿನ ಆರೋಗ್ಯಕ್ಕೆ ಬಾಟಲ್‌ಗಳು ಏಕೆ ಅಪಾಯಕಾರಿಯಾಗಬಲ್ಲವು? ಎಂಬುದನ್ನು ಕೇಳಿ
 • ಆಹಾರ ಕೆಟ್ಟುಹೋಗಿದೆಯೇ ಹಾಗು ಇನ್ನು ತಿನ್ನಲು ಸುರಕ್ಷಿತವಲ್ಲವೇ ಎಂದು ಹೇಗೆ ತಿಳಿಯುವುದು ಎಂಬುದಕ್ಕಾಗಿ ಮಕ್ಕಳು ತಮಗಿಂತ ಹಿರಿಯರಾದ ಅಣ್ಣ ಅಥವಾ ಅಕ್ಕನನ್ನು ಕೇಳಬಹುದು.

ಹೆಚ್ಚಿನ ಮಾಹಿತಿಗಾಗಿ ದಯವಿಟ್ಟು www.childrenforhealth.org ಅಥವಾ clare@childrenforhealth.org ಅನ್ನು ಸಂಪರ್ಕಿಸಿ.

ಕನ್ನಡ ಲಿಪಿ Home