ಕಲಿಕೆ ಮತ್ತು ಹಂಚಿಕೆಗೆ ಮಕ್ಕಳಿಗಾಗಿ 100 ಆರೋಗ್ಯ ಸಂದೇಶಗಳು ಸರಳವಾಗಿದ್ದು, ವಿಶ್ವಾಸಾರ್ಹ ಆರೋಗ್ಯ ಶಿಕ್ಷಣ ಸಂದೇಶಗಳು 8-14 ವರ್ಷಗಳ ನಡುವಿನ ಮಕ್ಕಳಿಗೆ ಉದ್ದೇಶಿತವಾಗಿವೆ. ಹಾಗಾಗಿ ಇದು 10-14 ವರ್ಷ ವಯಸ್ಸಿನ ನಡುವಿನ ತರುಣಾವಸ್ಥೆಯವರನ್ನು ಒಳಗೊಳ್ಳುತ್ತದೆ. 10-14 ವರ್ಷ ಪ್ರಾಯದ ತರುಣಾವಸ್ಥೆಯಲ್ಲಿರುವ ಮಕ್ಕಳಿಗೆ ಮಾಹಿತಿ ಒದಗಿಸುತ್ತದೆ ಎಂಬುದನ್ನು ಖಚಿತಪಡಿಸಿಕೊಳ್ಳುವುದು ವಿಶೇಷವಾಗಿ ಉಪಯುಕ್ತವೂ ಹಾಗು ಮುಖ್ಯವಾಗಿರುತ್ತದೆ ಎಂದು ನಾವು ಭಾವಿಸುತ್ತೇವೆ, ಏಕೆಂದರೆ ಈ ವಯಸ್ಸಿನ ಮಕ್ಕಳು ತಮ್ಮ ಕುಟುಂಬದ ಚಿಕ್ಕ ಮಕ್ಕಳ ಮೇಲೆ ಕಾಳಜಿ ವಹಿಸುವುದು ಸಹಜ. ಜೊತೆಗೆ, ಈ ರೀತಿಯಲ್ಲಿ ಅವರ ಕುಟುಂಬಗಳಿಗೆ ಸಹಾಯ ಮಾಡಲು ಅವರು ಮಾಡುತ್ತಿರುವ ಕೆಲಸವನ್ನು ಗುರುತಿಸುವುದು ಮತ್ತು ಮೆಚ್ಚಿಕೊಳ್ಳುವುದು ಮುಖ್ಯವಾಗಿರುತ್ತದೆ.

ಈ ನೂರು ಸಂದೇಶಗಳು ಮಲೇರಿಯಾ, ಭೇದಿ, ಪೌಷ್ಟಿಕತೆ, ಕೆಮ್ಮು-ಶೀತ-ಜ್ವರ, ಹೊಟ್ಟೆಯ ಹುಳುಗಳು, ನೀರು ಹಾಗೂ ಶುಚಿತ್ವ, ಪ್ರತಿರೋಧಕ ಲಸಿಕೆಗಳು, ಎಚ್ಐವಿ ಮತ್ತು ಏಡ್ಸ್, ಹಾಗೂ ಅಪಘಾತಗಳು, ಘಾಯ ಮತ್ತು ಮಕ್ಕಳ ಆರಂಭಿಕ ಬೆಳೆವಣಿಗೆಯಂತಹ ಹತ್ತು ಪ್ರಮುಖ ಆರೋಗ್ಯ ವಿಷಯಗಳಲ್ಲಿ ಪ್ರತಿಯೊಂದರ ಬಗ್ಗೆಯೂ ಹತ್ತು ಸಂದೇಶಗಳನ್ನು ಒಳಗೊಂಡಿವೆ. ಸರಳವಾದ ಈ ಸಂದೇಶಗಳು ಪೋಷಕರಿಗೆ, ಆರೋಗ್ಯ ಶಿಕ್ಷಕರಿಗೆ ಮಕ್ಕಳ ಜೊತೆ ಮನೆಯಲ್ಲಿ, ಶಾಲೆಗಳಲ್ಲಿ, ಕೂಟಗಳಲ್ಲಿ ಹಾಗೂ ಕ್ಲಿನಿಕ್ಕುಗಳಲ್ಲಿ ವ್ಯವಹರಿಸಲು ನೆರವಾಗುತ್ತವೆ.

ಇಲ್ಲಿ ವಿಷಯ 8 ರ ಬಗ್ಗೆ 10 ಸಂದೇಶಗಳಿವೆ: ಹೊಟ್ಟೆಯಲ್ಲಿ ಹುಳು ಅಥವಾ ಕರುಳಿನ ಹುಳು

 1. ಮಿಲಿಯನ್‌ಗಟ್ಟಳೆ ಮಕ್ಕಳು ತಮ್ಮ ದೇಹದೊಳಗೆ, ಕರುಳು ಎಂಬ ಅಂಗದೊಳಗೆ ಹುಳುಗಳನ್ನು ಹೊಂದಿರುತ್ತಾರೆ ಹಾಗು ನಾವು ಸೇವಿಸಿದ ಆಹಾರವನ್ನುದೇಹವು ಈ ಅಂಗದಿಂದಲೇ ಪಡೆಯುವುದು.
 2. ನಮ್ಮ ದೇಹದಲ್ಲಿ ಬೇರೆಬೇರೆ ವಿಧದ ಹುಳುಗಳು ಬದುಕಿರಬಲ್ಲವು: ಜಂತುಹುಳು, ಚಾಟಿಹುಳು, ಕೊಂಡಿಹುಳು ಮತ್ತು ಬಿಲ್ಹಾರ್ಜಿಯ (ಸ್ಖಿಸ್ಟೊಸೋಮಯಾಸಿಸ್). ಇನ್ನೂ ಬೇರೆಯವೂ ಇವೆ!
 3. ಇವು ನಮಗೆ ಕಾಯಿಲೆಯಾದಂತೆ ಅಥವಾ ದುರ್ಬಲತೆ ಅನಿಸುವಂತೆ ಮಾಡಬಲ್ಲವು. ಅವುಗಳು ಹೊಟ್ಟೆನೋವು, ಕೆಮ್ಮು, ಜ್ವರ ಮತ್ತು ಕಾಯಿಲೆಯನ್ನು ಉಂಟು ಮಾಡಬಲ್ಲವು.
 4. ಹುಳುಗಳು ನಿಮ್ಮ ದೇಹದೊಳಗಿರುತ್ತವೆ ಹೀಗಾಗಿ ಅವುಗಳ ಇರುವಿಕೆ ನಿಮಗೆ ತಿಳಿಯದೇ ಹೋಗಬಹುದು ಆದರೆ ಕೆಲವೊಮ್ಮೆ ನಿಮ್ಮ ಮಲದಲ್ಲಿ ನೀವು ಹುಳುಗಳನ್ನು ನೋಡಬಹುದು.
 5. ಹುಳುಗಳು ಮತ್ತು ಅವುಗಳ ಮೊಟ್ಟೆಗಳು ನಮ್ಮ ದೇಹದೊಳಗೆ ಹಲವು ರೀತಿಯಲ್ಲಿ ಬಂದು ಸೇರುತ್ತವೆ. ಕೆಲವು ಆಹಾರದ ಮೂಲಕ ಅಥವಾ ಸುರಕ್ಷಿತವಲ್ಲದ ನೀರಿನಂತಹ ಪಾನೀಯದ ಮೂಲಕ ದೇಹದೊಳಗೆ ಬಂದು ಸೇರುತ್ತವೆ. ಇನ್ನು ಕೆಲವು ಬರಿಗಾಲಿನ ಮೂಲಕ ಬಂದು ಸೇರುತ್ತವೆ.
 6. ಹುಳು-ನಿವಾರಕ ಮಾತ್ರೆಗಳಿಂದ ಹುಳುಗಳನ್ನು ಕೊಲ್ಲುವುದು ಸುಲಭ ಮತ್ತು ದುಬಾರಿಯಲ್ಲದ ವಿಧಾನ. ಆರೋಗ್ಯ ಕಾರ್ಯಕರ್ತರು ಪ್ರತಿ 6 ಅಥವಾ 12 ತಿಂಗಳುಗಳಿಗೊಮ್ಮೆ, ಕೆಲ ಹುಳುಗಳಿಗೆ ಇನ್ನೂ ಹೆಚ್ಚು ಬಾರಿ ಇದನ್ನು ನೀಡುತ್ತಾರೆ.
 7. ಮಲ ಮೂತ್ರದಲ್ಲಿ ಈ ಹುಳುಗಳ ಮೊಟ್ಟೆಗಳು ವಾಸಿಸುತ್ತವೆ. ಮಲ ಮೂತ್ರವನ್ನು ಸುರಕ್ಷಿತವಾಗಿ ಹೊರಹಾಕಿ ಅಥವಾ ಶೌಚಾಲಯವನ್ನು ಬಳಸಿ. ನಿಮ್ಮ ಕೈಗಳಿಗೆ ರೋಗಾಣುಗಳು ಬರುವುದನ್ನು ತಡೆಯಲು ಮಲ ಮೂತ್ರ ವಿಸರ್ಜನೆ ಮಾಡಿದ ನಂತರ ಅಥವಾ ಅದಕ್ಕಾಗಿ ಯಾರಾದರೂ ಚಿಕ್ಕವರಿಗೆ ಸಹಾಯ ಮಾಡಿದರೆ ನಂತರ ಸೋಪಿನಿಂದ ನಿಮ್ಮ ಕೈಗಳನ್ನು ತೊಳೆದುಕೊಳ್ಳಿ.
 8. ಮಲ ಮೂತ್ರ ವಿಸರ್ಜನೆಯ ನಂತರ ಮತ್ತು ಆಹಾರ ತಯಾರಿಸುವುದಕ್ಕೂ ಮುನ್ನ, ತಿನ್ನುವ ಅಥವಾ ಕುಡಿಯುವ ಮುನ್ನ ಸಾಬೂನಿನಿಂದ ಕೈಗಳನ್ನು ತೊಳೆಯುವ ಮೂಲಕ, ಹಣ್ಣು ಮತ್ತು ತರಕಾರಿಗಳನ್ನು ತೊಳೆಯುವ ಮೂಲಕ ಹಾಗು ಪಾದರಕ್ಷೆಗಳನ್ನು ಧರಿಸಿ, ಹುಳುಗಳು ನಿಮ್ಮ ದೇಹ ಪ್ರವೇಶಿಸುವುದನ್ನು ತಪ್ಪಿಸಿ.
 9. ಕೆಲವು ಕ್ರಿಮಿಕೀಟಗಳು ಮಣ್ಣಿನಲ್ಲಿ ವಾಸಿಸುತ್ತವೆ, ಆದ್ದರಿಂದ ಮಣ್ಣನ್ನು ಮುಟ್ಟಿದ ನಂತರ ನಿಮ್ಮ ಕೈಗಳನ್ನು ಸಾಬೂನಿನಿಂದ ತೊಳೆದುಕೊಳ್ಳಿ.
 10. ತರಕಾರಿಗಳನ್ನು ಅಥವಾ ಹಣ್ಣನ್ನು ತಿನ್ನುವ ಮುನ್ನ ತೊಳೆಯುವಾಗ, ಮನುಷ್ಯರ ಮಲ ಮೂತ್ರ ಹೊಂದಿರದ, ಶುದ್ಧವಾದ ನೀರಿನಲ್ಲಿ ಅವುಗಳನ್ನು ತೊಳೆಯಿರಿ.

ಪರಿಣತ ಆರೋಗ್ಯ ಶಿಕ್ಷಕರು ಹಾಗೂ ತಜ್ಞ ವೈದ್ಯರುಗಳು ಪರಿಶೀಲಿಸಿರುವ ಈ ಆರೋಗ್ಯ ಸಂದೇಶಗಳು ಓ.ಆರ್.ಬಿ. ಯ ಆರೋಗ್ಯ ಕುರಿತ ವೆಬ್ ತಾಣ (http://www.health-orb.org) ದಲ್ಲಿಯೂ ಲಭ್ಯ.

ಈ ವಿಷಯದ ಬಗ್ಗೆ ಇನ್ನಷ್ಟು ಅರಿವು ಮೂಡಲು ಹಾಗೂ ಈ ಸಂದೇಶಗಳನ್ನು ಹಂಚಿಕೊಳ್ಳಲು ಮಕ್ಕಳಿಗೆ ನೆರವಾಗುವ ಕೆಲವು ಚಟುವಟಿಕೆಗಳು ಇಲ್ಲಿವೆ.

ಕರುಳಿನಹುಳುಗಳು: ಮಕ್ಕಳು ಏನು ಮಾಡಬಹುದು?

 • ನಮ್ಮ ಸ್ವಂತ ಭಾಷೆಯಲ್ಲಿ ನಮ್ಮದೇ ಆದ ಪದಗಳನ್ನು ಬಳಸಿ ಜಂತುಹುಳುಗಳ ಕುರಿತು ನಮ್ಮದೇ ಆದ ಸಂದೇಶಗಳನ್ನು ಮಾಡಿ!
 • ಈ ಸಂದೇಶಗಳು ಮರೆತು ಹೋಗದ ಹಾಗೆ ಬಾಯಿಪಾಠ ಮಾಡುವುದು!
 • ಇತರ ಮಕ್ಕಳು ಮತ್ತು ನಮ್ಮ ಕುಟುಂಬಗಳೊಂದಿಗೆ ಸಂದೇಶಗಳನ್ನು ಹಂಚಿಕೊಳ್ಳಿ.
 • ನಮ್ಮ ರಸಪ್ರಶ್ನೆಯಲ್ಲಿ ಭಾಗವಹಿಸಲು ಮತ್ತು ಹುಳುಗಳ ಬಗ್ಗೆ ನಿಮಗೆ ಎಷ್ಟು ತಿಳಿದಿದೆಯೆಂದು ಕಂಡುಹಿಡಿಯಲು “ವೋಟ್ ಯುವರ್ ಫೀಟ್” ಬಳಸಿ
 • ಹುಳುಗಳ ಕುರಿತು ಮಾಹಿತಿಯನ್ನು ಕೇಳಿ. ಇದರಿಂದ ನಮ್ಮ ಕೈಗಳನ್ನು ತೊಳೆಯುವ ಮತ್ತು ನಮ್ಮ ಪಾದರಕ್ಷೆಗಳನ್ನು ಧರಿಸುವ ಮೂಲಕ ಹುಳುಗಳ ಹರಡುವಿಕೆಯನ್ನು ನಾವು ಹೇಗೆ ತಡೆಯಬಹುದು ಎಂಬುದನ್ನು ಅರ್ಥಮಾಡಿಕೊಳ್ಳಬಹುದು.
 • ನಮ್ಮ ಶಾಲೆಯಲ್ಲಿ ಆಹಾರವನ್ನು ಹೇಗೆ ತಯಾರಿಸಲಾಗುತ್ತದೆ ಮತ್ತು ನಮ್ಮ ಅಡುಗೆ ಮಾಡುವವರು ಹೇಗೆ ಆಹಾರವನ್ನು ಸುರಕ್ಷಿತವಾಗಿ ಮತ್ತು ಹುಳುಗಳಿಂದ ಮುಕ್ತವಾಗಿ ಇಡುತ್ತಾರೆ ಎಂಬುದನ್ನು ಕಂಡುಹಿಡಿಯಿರಿ.
 • ಮಣ್ಣಿನ ಮತ್ತು ನೀರಿನಲ್ಲಿ ಬೀಳುವ ಶೌಚದಿಂದ ಹರಡುವ ಹುಳು ಮೊಟ್ಟೆಗಳನ್ನು ನಿಲ್ಲಿಸಲು ಯಾವಾಗಲೂ ಶೌಚಾಲಯವನ್ನು ಬಳಸಿ.
 • ನಮ್ಮ ಕೈಗಳನ್ನು ಸರಿಯಾಗಿ ಶುಚಿಗೊಳಿಸುವುದಕ್ಕೆ. ಸಾಬೂನು ಮತ್ತು ನೀರು ಮತ್ತು ಶುದ್ಧ ಬಟ್ಟೆಗಳ ಅಗತ್ಯವಿದೆ.
 • ಹುಳುಗಳ ಬಗ್ಗೆ ನಮ್ಮ ಕುಟುಂಬದವರಿಗೆ ಏನು ತಿಳಿದಿದೆ ಎಂದು ತಿಳಿಯಲು ಒಂದು ಸಮೀಕ್ಷೆಯನ್ನು ಮಾಡಿ.
 • ದುಷ್ಟ ಹುಳುಗಳು ಹೇಗೆ ನಮ್ಮ ಕುಟುಂಬದ ಆಹಾರವನ್ನು ಕದಿಯುತ್ತವೆ ಮತ್ತು ಅದನ್ನು ಮಕ್ಕಳು ಹೇಗೆ ನಿಲ್ಲಿಸುತ್ತಾರೆ ಎಂಬುದರ ಕುರಿತು ಒಂದು ನಾಟಕ ರಚಿಸಿ.
 • ಹಸಿ ತರಕಾರಿಗಳನ್ನು ತಿನ್ನುವ ಮುನ್ನ ಸರಿಯಾಗಿ ತೊಳೆಯುವುದು, ಮಾಂಸವನ್ನು ಸರಿಯಾಗಿ ಬೇಯಿಸುವುದು ಮತ್ತು ಆಹಾರವನ್ನು ತಯಾರಿಸುವ ಮೊದಲು ಆಹಾರವನ್ನು ಸುರಕ್ಷಿತವಾಗಿ ಮತ್ತು ಹುಳುಗಳಿಂದ ಮುಕ್ತಗೊಳಿಸುವುದು ಹೇಗೆ ಎಂಬುದನ್ನು ಪೋಸ್ಟರಗಳ ಮೂಲಕ ತೋರಿಸಿ.
 • ನಮ್ಮ ಕುಟುಂಬ, ವರ್ಗ ಅಥವಾ ಗುಂಪಿಗಾಗಿ ಟಿಪ್ಪಿ ಟ್ಯಾಪ್ ಮಾಡುವುದು ಮತ್ತು ಹ್ಯಾಂಡ್ ವಾಷಿಂಗ್ ಸ್ಟೇಷನ್ ಮಾಡುವುದು ಹೇಗೆ ಕಂಡುಹಿಡಿಯಿರಿ.
 • ಯಾವಾಗ ಮತ್ತು ಹೇಗೆ ನಮ್ಮ ಕೈಗಳನ್ನು ತೊಳೆದುಕೊಳ್ಳಬೇಕು. ಕೈಗಳನ್ನು ಸ್ವಚ್ಛವಾಗಿರಿಸುವುದರ ಮೂಲಕ ಹುಳುಗಳನ್ನು ಹೇಗೆ ತಡೆಯಬಹುದು ಎಂಬುದರ ಕುರಿತು ಹಾಡನ್ನು ರಚಿಸಿ.
 • ನಾವು ತರಕಾರಿಗಳನ್ನು ಮತ್ತು ಹಣ್ಣುಗಳನ್ನು ತಿನ್ನಲು ಅಥವಾ ಅಡುಗೆ ತಯಾರು ಮಾಡುವ ಮೊದಲು ತೊಳೆಯುದನ್ನು ನಮಗೆ ನೆನಪಿಸಲು ಪೋಸ್ಟರ್ ಮಾಡಿ.
 • ಹುಳುಗಳು ಹರಡದಂತೆ ನಾವು ಹೇಗೆ ನಿಲ್ಲಿಸಬಹುದು ಎಂಬುದರ ಬಗ್ಗೆ ಪಾತ್ರ-ಆಟ ಅಥವಾ ಕೈಗೊಂಬೆ ತಯಾರಿಸಿ.
 • ಹುಳುಗಳನ್ನು ಕುರಿತು ನಮ್ಮ ಜ್ಞಾನವನ್ನು ಪರೀಕ್ಷಿಸಲು ಅಥವಾ ಏನನ್ನಾದರೂ ಮಾಡುವ ಮೊದಲು ನಮ್ಮ ಕೈಗಳನ್ನು ತೊಳೆಯುವುದು ಯಾವಾಗ ಎಂದು ನಮಗೆ ತಿಳಿಯಲು ಮತ್ತು ಯಾವುದನ್ನಾದರೂ ಮಾಡಿದ ನಂತರ ನಮ್ಮ ಕೈಗಳನ್ನು ತೊಳೆಯುವುದು ಹೇಗೆ ಎಂದು ತಿಳಿಯಲು ರಸಪ್ರಶ್ನೆ ರಚಿಸಿ ಮತ್ತು ಬಿಟ್ಟ ಸ್ಥಳ ತುಂಬುವ ಪದಗಳ ಆಟದಲ್ಲಿ ತುಂಬಿಸಿ ರಚಿಸಿ ಮತ್ತು ಭಾಗವಹಿಸಿ. ಸಹಾಯಕ್ಕಾಗಿ ಕೆಳಗಿನ ಪ್ರಶ್ನೆಗಳನ್ನು ಬಳಸಿ.
 • ನಾವು ಸೇವಿಸುವ ಆಹಾರವನ್ನು ನಮ್ಮ ದೇಹಗಳು ಹೇಗೆ ಬಳಸುತ್ತವೆ? ನಮ್ಮ ದೊಡ್ಡ ಕರುಳಿನ ಎಷ್ಟುಉದ್ದ ಇದೆ? ಹುಳುಗಳು ನಮ್ಮ ಆಹಾರವನ್ನು ಹೇಗೆ ತೆಗೆದುಕೊಳ್ಳುತ್ತವೆ? ಟೇಪ್ ಹುಳು ಎಷ್ಟು ಉದ್ದ ಬೆಳೆಯುತ್ತದೆ? ಎಷ್ಟು ರೀತಿಯ ಹುಳುಗಳಿವೆ ಎಂದು ನಿಮಗೆ ಗೊತ್ತಾ? ನೀವು ವಾಸಿಸುವ ಪ್ರದೇಶದಲ್ಲಿ ಯಾವ ರೀತಿಯ ಹುಳುಗಳು ಹೆಚ್ಚು ಸಾಮಾನ್ಯವಾಗಿರುತ್ತವೆ? ನೀವು ಹುಳುಗಳನ್ನು ಹೊಂದಿರುವ ಚಿಹ್ನೆಗಳು ಯಾವುವು? ಡಿ-ವರ್ಮಿಂಗ್ ಅಥವ ಕ್ರಿಮಿನಾಶಕ ಔಷಧಿಯನ್ನು ನೀವು ಎಲ್ಲಿ ಪಡೆಯಬಹುದು ಮತ್ತು ಯಾರು ಅದನ್ನು ತೆಗೆದುಕೊಳ್ಳಬೇಕು? ಪ್ರತಿ ದಿನವೂ ಹುಳು ಎಷ್ಟು ಮೊಟ್ಟೆಗಳನ್ನು ಇಡಬಹುದು? ಹುಳುಗಳು ನಮ್ಮ ದೇಹಗಳಿಂದ ಮತ್ತು ಆಹಾರದಿಂದ ವಿಟಮಿನ್ ಎ ನಂತಹ ಇತರ ಪೋಷಕಾಂಶಗಳನ್ನು ತೆಗೆದುಕೊಳ್ಳಬಹುದು – ನಾವು ವಿಟಮಿನ್ ಎ ನಮಗೆ ಏಕೆ ಅಗತ್ಯವಿದೆ?? ಹುಳುವಿನ ಶಿಶುಗಳನ್ನು ಲಾರ್ವಾ ಎಂದು ಕರೆಯಲ್ಪಡುತ್ತವೆ. ನಮ್ಮ ಚರ್ಮದ ಮೂಲಕ ಯಾವ ಲಾರ್ವಾಗಳು ನಮ್ಮ ಶರೀರಕ್ಕೆ ಹೋಗುತ್ತವೆ? ಟಾಯ್ಲೆಟ್ ಅಥವಾ ಲ್ಯಾಟ್ರಿನ್ ಅನ್ನು ಬಳಸುವುದು ಮತ್ತು ನಮ್ಮ ಶೌಚವನ್ನು ತೊಡೆದುಹಾಕುವುದು ಹೇಗೆ ಹುಳುಗಳು ಹರಡಲು ನಿಲ್ಲಿಸಲು ಸಹಾಯ ಮಾಡುತ್ತದೆ? ನಮ್ಮ ಶಾಲೆಗೆ ಡಿ-ವರ್ಮಿಂಗ್ ದಿನಗಳಿವೆಯೇ? ಇದ್ದರೆ ಯಾವಾಗ? ಅದೇ ದಿನ ಪ್ರತಿಯೊಬ್ಬರೂ ಡಿ-ವರ್ಮಿಂಗ್ ಮಾತ್ರೆಗಳನ್ನು ಏಕೆ ಪಡೆಯುತ್ತಾರೆ? ಜಗತ್ತಿನಲ್ಲಿ ಎಷ್ಟು ಮಕ್ಕಳು ಹುಳುಗಳನ್ನು ಹೊಂದಿದ್ದಾರೆ? ಹುಳುಗಳು ಹರಡುವುದನ್ನು ನಿಲ್ಲಿಸು ಏಕೆ ಮುಖ್ಯ? ನಮ್ಮ ಜೀರ್ಣಾಂಗ ವ್ಯವಸ್ಥೆಯ ಬಗ್ಗೆ – ಅದು ಹೇಗೆ ಕೆಲಸ ಮಾಡುತ್ತದೆ ಮತ್ತು ಅದು ಕೆಲಸ ಮಾಡುವುದನ್ನು ತಡೆಯಲು ಹುಳುಗಳು ಏನು ಮಾಡುತ್ತವೆ? ಒಂದು ಹುಳುವಿನ ಮೊಟ್ಟೆಯು ಎಷ್ಟು ಚಿಕ್ಕದಾಗಿರುತ್ತದೆ? ನಿಮಗೆ ತಿಳಿದಿರುವ ಅತಿ ಚಿಕ್ಕ ವಸ್ತು ಯಾವುದು? ನೀರು ಶುದ್ಧವಾಗಿದೆಯೋ ಅಥವಾ ಕೊಳಕಾಗಿದೆಯೋ ಎಂದು ನಾವು ಹೇಗೆ ಹೇಳಬಹುದು? ಸಸ್ಯಗಳು ಬೆಳೆಯಬೇಕಾದರೆ ಏನು ಬೇಕಾಗುತ್ತದೆ? ಸಸ್ಯಗಳಿಗೆ ಆಹಾರಕ್ಕಾಗಿ ಸುರಕ್ಷಿತವಾಗಿರುವ ರಸಗೊಬ್ಬರವನ್ನು ನಾವು ಹೇಗೆ ಮಾಡಬಹುದು?

ಟಿಪ್ಪಿ ಟ್ಯಾಪ್ ಅಥವಾ ಹ್ಯಾಂಡ್ ವಾಷಿಂಗ್ ಸ್ಟೇಷನ್ ಅಥವಾ ಬಿಟ್ಟ ಸ್ಥಳ ತುಂಬಿ ಆಡುವ ಆಟ ಅಥವಾ ಬೇರೆ ಯಾವುದನ್ನಾದರೂ ಹೇಗೆ ಮಾಡುವುದು ಎಂಬುದರ ಕುರಿತು ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು www.childrenforhealth.org ಅಥವಾ clare@childrenforhealth.org ಅನ್ನು ಸಂಪರ್ಕಿಸಿ.

ಕನ್ನಡ ಲಿಪಿ Home