ಕಲಿಕೆ ಮತ್ತು ಹಂಚಿಕೆಗೆ ಮಕ್ಕಳಿಗಾಗಿ 100 ಆರೋಗ್ಯ ಸಂದೇಶಗಳು ಸರಳವಾಗಿದ್ದು, ವಿಶ್ವಾಸಾರ್ಹ ಆರೋಗ್ಯ ಶಿಕ್ಷಣ ಸಂದೇಶಗಳು 8-14 ವರ್ಷಗಳ ನಡುವಿನ ಮಕ್ಕಳಿಗೆ ಉದ್ದೇಶಿತವಾಗಿವೆ. ಹಾಗಾಗಿ ಇದು 10-14 ವರ್ಷ ವಯಸ್ಸಿನ ನಡುವಿನ ತರುಣಾವಸ್ಥೆಯವರನ್ನು ಒಳಗೊಳ್ಳುತ್ತದೆ. 10-14 ವರ್ಷ ಪ್ರಾಯದ ತರುಣಾವಸ್ಥೆಯಲ್ಲಿರುವ ಮಕ್ಕಳಿಗೆ ಮಾಹಿತಿ ಒದಗಿಸುತ್ತದೆ ಎಂಬುದನ್ನು ಖಚಿತಪಡಿಸಿಕೊಳ್ಳುವುದು ವಿಶೇಷವಾಗಿ ಉಪಯುಕ್ತವೂ ಹಾಗು ಮುಖ್ಯವಾಗಿರುತ್ತದೆ ಎಂದು ನಾವು ಭಾವಿಸುತ್ತೇವೆ, ಏಕೆಂದರೆ ಈ ವಯಸ್ಸಿನ ಮಕ್ಕಳು ತಮ್ಮ ಕುಟುಂಬದ ಚಿಕ್ಕ ಮಕ್ಕಳ ಮೇಲೆ ಕಾಳಜಿ ವಹಿಸುವುದು ಸಹಜ. ಜೊತೆಗೆ, ಈ ರೀತಿಯಲ್ಲಿ ಅವರ ಕುಟುಂಬಗಳಿಗೆ ಸಹಾಯ ಮಾಡಲು ಅವರು ಮಾಡುತ್ತಿರುವ ಕೆಲಸವನ್ನು ಗುರುತಿಸುವುದು ಮತ್ತು ಮೆಚ್ಚಿಕೊಳ್ಳುವುದು ಮುಖ್ಯವಾಗಿರುತ್ತದೆ.

ಈ ನೂರು ಸಂದೇಶಗಳು ಮಲೇರಿಯಾ, ಭೇದಿ, ಪೌಷ್ಟಿಕತೆ, ಕೆಮ್ಮು-ಶೀತ-ಜ್ವರ, ಹೊಟ್ಟೆಯ ಹುಳುಗಳು, ನೀರು ಹಾಗೂ ಶುಚಿತ್ವ, ಪ್ರತಿರೋಧಕ ಲಸಿಕೆಗಳು, ಎಚ್ಐವಿ ಮತ್ತು ಏಡ್ಸ್, ಹಾಗೂ ಅಪಘಾತಗಳು, ಘಾಯ ಮತ್ತು ಮಕ್ಕಳ ಆರಂಭಿಕ ಬೆಳೆವಣಿಗೆಯಂತಹ ಹತ್ತು ಪ್ರಮುಖ ಆರೋಗ್ಯ ವಿಷಯಗಳಲ್ಲಿ ಪ್ರತಿಯೊಂದರ ಬಗ್ಗೆಯೂ ಹತ್ತು ಸಂದೇಶಗಳನ್ನು ಒಳಗೊಂಡಿವೆ. ಸರಳವಾದ ಈ ಸಂದೇಶಗಳು ಪೋಷಕರಿಗೆ, ಆರೋಗ್ಯ ಶಿಕ್ಷಕರಿಗೆ ಮಕ್ಕಳ ಜೊತೆ ಮನೆಯಲ್ಲಿ, ಶಾಲೆಗಳಲ್ಲಿ, ಕೂಟಗಳಲ್ಲಿ ಹಾಗೂ ಕ್ಲಿನಿಕ್ಕುಗಳಲ್ಲಿ ವ್ಯವಹರಿಸಲು ನೆರವಾಗುತ್ತವೆ.

ಇಲ್ಲಿ ವಿಷಯ 9 ರ ಬಗ್ಗೆ 10 ಸಂದೇಶಗಳಿವೆ: ಅಪಘಾತಗಳು ಮತ್ತು ದುರ್ಘಟನೆಗಳನ್ನು ತಡೆಗಟ್ಟುವುದು

 1. ಅಡುಗೆ ಮನೆಯ ಪ್ರದೇಶವು ಚಿಕ್ಕ ಮಕ್ಕಳಿಗೆ ಅಪಾಯಕಾರಿ. ಬೆಂಕಿಯಿಂದ ಮತ್ತು ಚೂಪಾದ ಅಥವಾ ಭಾರವಾದ ವಸ್ತುಗಳಿಂದ ಮಕ್ಕಳನ್ನು ದೂರವಿರಿಸಿ.
 2. ಬೆಂಕಿಗಳಿಂದ ಉಂಟಾಗುವ ಹೊಗೆಯಿಂದ ಮಕ್ಕಳನ್ನು ದೂರವಿರಿಸಿ. ಇದು ಅನಾರೋಗ್ಯ ಮತ್ತು ಕೆಮ್ಮುಗೆ ಕಾರಣವಾಗುತ್ತದೆ.
 3. ವಿಷಯುಕ್ತವಾದ ಯಾವುದನ್ನಾದರೂ ಮಕ್ಕಳ ವ್ಯಾಪ್ತಿಯಿಂದ ಹೊರಗಿಡಬೇಕು. ಖಾಲಿ ಮೃದು ಪಾನೀಯ ಬಾಟಲಿಗಳಲ್ಲಿ ವಿಷವನ್ನು ಹಾಕಬೇಡಿ.
 4. ಮಗುವಿನ ಕೈ, ಮೈ ಅಥವಾ ಯಾವುದೇ ಭಾಗವು ಸುಟ್ಟು ಹೋದರೆ, ನೋವು ಕಡಿಮೆಯಾಗುವವರೆಗೂ (10 ನಿಮಿಷಗಳು ಅಥವಾ ಅದಕ್ಕಿಂತ ಹೆಚ್ಚು) ತಣ್ಣನೆಯ ನೀರನ್ನು ಹಾಕುತ್ತಿರಬೇಕು.
 5. ವಾಹನಗಳು ಮತ್ತು ಬೈಸಿಕಲಗಳು ಪ್ರತಿ ದಿನವೂ ಮಕ್ಕಳನ್ನು ಅಪಘಾತಕ್ಕೆ ಈಡು ಮಾಡುತ್ತವೆ ಮತ್ತು ಗಾಯಗೊಳಿಸುತ್ತವೆ. ಎಲ್ಲಾ ವಾಹನಗಳ ಬಗ್ಗೆ ಎಚ್ಚರವಿರಲಿ ಮತ್ತು ಇತರರು ಮತ್ತು ಮಕ್ಕಳು ಸುರಕ್ಷಿತವಾಗಿರುವುದು ಹೇಗೆ ಎಂದು ತೋರಿಸಿ.
 6. ಚಾಕುಗಳು, ಗಾಜು, ವಿದ್ಯುತ್ ಪ್ಲಗ್‍ಗಳು, ತಂತಿ, ಉಗುರುಗಳು, ಪಿ‍ನ್‍ಗಳು ಮಕ್ಕಳಿಗೆ ಅಪಾಯವನ್ನು ಉಂಟು ಮಾಡುತ್ತವೆ. ಈ ಕುರಿತು ಮಕ್ಕಳಿಗೆ ತರಬೇತಿ ನೀಡಿ.
 7. ಚಿಕ್ಕ ಮಕ್ಕಳು ಕಸವನ್ನು ತಿನ್ನುವುದು ಅಥವಾ ಚಿಕ್ಕ ವಸ್ತುಗಳನ್ನು ತಮ್ಮ ಬಾಯಿಯೊಳಗೆ ಅಥವ ಬಾಯಿಯ ಹತ್ತಿರ ಹಾಕಿಕೊಳ್ಳುವುದನ್ನು ತಡೆಯಿರಿ. (ಉದಾ. ನಾಣ್ಯಗಳು, ಗುಂಡಿಗಳು) ಇವುಗಳು ಸರಾಗವಾಗಿ ಉಸಿರಾಡಲು ತೊಂದರೆಯನ್ನುಂಟು ಮಾಡುತ್ತವೆ.
 8. ಚಿಕ್ಕ ಮಕ್ಕಳು ನೀರಿಗೆ ಹತ್ತಿರವಾಗಿ ಆಡುವುದನ್ನು ತಪ್ಪಿಸಿ. ಇದರಿಂದ ನೀರಿನೊಳಗೆ ಬೀಳುವ ಸಾಧ್ಯತೆ ಇರುತ್ತದೆ. (ನದಿಗಳು, ಸರೋವರಗಳು, ಕೊಳಗಳು, ಬಾವಿಗಳು).
 9. ಮನೆ ಅಥವಾ ಶಾಲೆಗೆ ಪ್ರಥಮ ಚಿಕಿತ್ಸಾ ಕಿಟ್ ರಚಿಸಿ (ಸಾಬೂನು, ಕತ್ತರಿ, ಸೋಂಕುನಿವಾರಕ ಮತ್ತು ಆಂಟಿಸೆಪ್ಟಿಕ್ ಕ್ರೀಮ್, ಹತ್ತಿ ಉಣ್ಣೆ, ಥರ್ಮಾಮೀಟರ್, ಬ್ಯಾಂಡೇಜಗಳು / ಪ್ಲಾಸ್ಟರಗಳು ಮತ್ತು ಒಆರಎಸ್).
 10. ನೀವು ಚಿಕ್ಕ ಮಗುವಿನೊಂದಿಗೆ ಹೊಸ ಪ್ರದೇಶಕ್ಕೆ ಹೋದಾಗ ಅಲ್ಲಿಯ ಕುರಿತು ನಿಮಗೆ ಜ್ಞಾನ ಇರಲಿ! ಚಿಕ್ಕ ಮಕ್ಕಳಿಗೆ ಅಲ್ಲಿಯ ಅಪಾಯಗಳ ಕುರಿತು ಕೇಳಿ ಮತ್ತು ಗಮನವಿಡಿ.

ಪರಿಣತ ಆರೋಗ್ಯ ಶಿಕ್ಷಕರು ಹಾಗೂ ತಜ್ಞ ವೈದ್ಯರುಗಳು ಪರಿಶೀಲಿಸಿರುವ ಈ ಆರೋಗ್ಯ ಸಂದೇಶಗಳು ಓ.ಆರ್.ಬಿ. ಯ ಆರೋಗ್ಯ ಕುರಿತ ವೆಬ್ ತಾಣ (http://www.health-orb.org) ದಲ್ಲಿಯೂ ಲಭ್ಯ.

ಈ ವಿಷಯದ ಬಗ್ಗೆ ಇನ್ನಷ್ಟು ಅರಿವು ಮೂಡಲು ಹಾಗೂ ಈ ಸಂದೇಶಗಳನ್ನು ಹಂಚಿಕೊಳ್ಳಲು ಮಕ್ಕಳಿಗೆ ನೆರವಾಗುವ ಕೆಲವು ಚಟುವಟಿಕೆಗಳು ಇಲ್ಲಿವೆ.

ಅಪಘಾತಗಳು ಮತ್ತು ದುರ್ಘಟನೆಗಳನ್ನು ತಡೆಗಟ್ಟುವುದು: ಮಕ್ಕಳು ಏನು ಮಾಡಬಹುದು?

 • ನಮ್ಮದೇ ಆದ ಭಾಷೆಯಲ್ಲಿ ನಮ್ಮದೇ ಆದ ಪದಗಳನ್ನು ಬಳಸಿಕೊಂಡು ಅಪಘಾತ ಮತ್ತು ಗಾಯಗಳನ್ನು ತಡೆಯುವುದರ ಕುರಿತು ಸಂದೇಶಗಳನ್ನು ಮಾಡಿ!
 • ಸಂದೇಶಗಳನ್ನು ಮರೆಯದಹಾಗೆ ಬಾಯಿಪಾಠ ಮಾಡಿ!
 • ಈ ಸಂದೇಶಗಳನ್ನು ನಮ್ಮ ಕುಟುಂಬಗಳೊಂದಿಗೆ ಮತ್ತು ಇತರರೊಂದಿಗೆ ಹಂಚಿಕೊಳ್ಳಿ!
 • ವಿಷವನ್ನು ಸುರಕ್ಷಿತವಾಗಿ ಇರಿಸುವ ಕುರಿತು ಪೋಸ್ಟರಗಳನ್ನು ಮಾಡಿ: ಅವುಗಳನ್ನು ಶೇಖರಿಸಿಡುವುದು ಹೇಗೆ, ಅವುಗಳನ್ನು ಲೇಬಲ್ ಮಾಡುವುದು ಹೇಗೆ ಮತ್ತು ಮಕ್ಕಳನ್ನು ದೂರವಿರಿಸುವುದು ಹೇಗೆ ಎಂಬುದರ ಕುರಿತು ತಿಳಿಯಿರಿ.
 • ಯಾರಾದರೂ ಗಾಯಗೊಂಡರೆ ನಾವು ಬಳಸಬಹುದಾದ ಪ್ರಥಮ ಚಿಕಿತ್ಸೆ ಕಿಟ್ ನಿಮ್ಮ ಬಳಿ ಇಟ್ಟುಕೊಳ್ಳಿ
 • ಚಿಕ್ಕ ಮಕ್ಕಳು ಆಟವಾಡಲು ಸುರಕ್ಷಿತವಾದ ಆಟಿಕೆಗಳನ್ನು ನೀಡಿ.
 • ತುರ್ತುಸ್ಥಿತಿಯಲ್ಲಿ ಬಳಸಬಹುದಾದ ನದಿ ಅಥವಾ ಸರೋವರಕ್ಕೆ ಹಗ್ಗ ಮತ್ತು ಫ್ಲೋಟ್ ಅಥವಾ ತಾತ್ಕಾಲಿಕ ಸೇತುವೆ ಮಾಡಿ.
 • ನಿಮ್ಮ ಶಾಲೆಯಲ್ಲಿ ಪ್ರಥಮ ಚಿಕಿತ್ಸಾ ಕೇಂದ್ರವನ್ನು ರಚಿಸಿ.
 • ಮಕ್ಕಳ ಸುರಕ್ಷತೆಯ ಬಗ್ಗೆ ಎಲ್ಲರಿಗೂ ಅರಿವು ಮೂಡಿಸಲು ಸುರಕ್ಷತಾ ಪ್ರಚಾರವನ್ನು ರಚಿಸಿ.
 • ಸಮುದಾಯದಲ್ಲಿ ನೀರಿನಲ್ಲಿ ಮಕ್ಕಳು ಮುಳುಗಿಹೋಗುವ ಅಪಾಯ ಇರುವ ಪ್ರದೇಶಗಳನ್ನು ಗುರುತಿಸಿ. ಮತ್ತು ಮಕ್ಕಳು ಸುರಕ್ಷಿತವಾಗಿರಲು ಏನು ಮಾಡಬಹುದೆಂದು ಕಂಡುಹಿಡಿಯಲು ಸಮೀಕ್ಷೆಯನ್ನು ಮಾಡಿ
 • ಆದರೆ ಏಕೆ? ಎನ್ನುವ ಮನೆಯಲ್ಲಿ ಆಗಬಹುದಾದ ಅಪಘಾತಗಳ ಕುರಿತು ಆಟ ಆಡಿ.
 • ನಮ್ಮ ಮನೆಗಳನ್ನು ಸುರಕ್ಷಿತವಾಗಿರಿಸುವುದು ಹೇಗೆ ಎಂಬುದರ ಕುರಿತು ಪೋಸ್ಟರಗಳು, ಹಾಡುಗಳು ಮತ್ತು ನಾಟಕಗಳನ್ನು ರಚಿಸಿ, ಆಯೋಜಿಸಿ ಮತ್ತು ಹಂಚಿಕೊಳ್ಳಿ.
 • ಮನೆ ಮತ್ತು ಶಾಲೆಯ ಪ್ರಥಮ ಚಿಕಿತ್ಸಾ ಕಿಟ್ ನಲ್ಲಿ ಏನು ಬೇಕಾಗುತ್ತದೆ ಎಂಬುದರ ಕುರಿತು ಆರೋಗ್ಯ ಕಾರ್ಯಕರ್ತದಿಂದ ತಿಳಿದುಕೊಳ್ಳಿ.
 • ಪೋಸ್ಟರ್ ಅಥವಾ ಚಿತ್ರಗಳಲ್ಲಿ ಅಪಾಯಗಳನ್ನು ಗುರುತಿಸಿ ಮತ್ತು ಮತ್ತು ಅಪಘಾತಗಳ ಎಲ್ಲ ಅಪಾಯಗಳನ್ನು ನಾವು ಕಂಡುಕೊಳ್ಳಬಹುದೇ ಎನ್ನುವ ಆಟವನ್ನಾಡಿ.
 • ರಸ್ತೆಗಳಲ್ಲಿ ಮಕ್ಕಳ ಸುರಕ್ಷತೆಯ ಕುರಿತು ಅರಿವು ಮೂಡಿಸಲು ಪ್ರಚಾರವನ್ನು ಪ್ರಾರಂಭಿಸಿ.
 • ಮಗುವನ್ನು ನೋಡಿಕೊಳ್ಳುತ್ತಿದ್ದಾಗ ರೋಲ್ ಪ್ಲೇ ಸುರಕ್ಷತೆಯ ಕುರಿತು ಇರುತ್ತದೆ.
 • ಮೂಲಭೂತ ಪ್ರಥಮ ಚಿಕಿತ್ಸೆಯನ್ನು ಕಲಿಯಲು ನಾವು ನಮ್ಮ ಪ್ರಥಮ ಚಿಕಿತ್ಸಾ ಕೌಶಲ್ಯಗಳನ್ನು ಅಭಿವೃದ್ಧಿಪಡಿಸಲು ಮತ್ತು ಅಭ್ಯಾಸ ಮಾಡಲು ತುರ್ತುಸ್ಥಿತಿ, ಪಾತ್ರ-ವಹನೆಯಲ್ಲಿ ಸಹಾಯ ಮಾಡಬೇಕು ಮತ್ತು ನಮ್ಮ ಕುಟುಂಬ ಮತ್ತು ಸ್ನೇಹಿತರೊಂದಿಗೆ ಇದನ್ನು ಹಂಚಿಕೊಳ್ಳಬೇಕು.
 • ನಮ್ಮ ಮನೆಗಳಲ್ಲಿ ಚಿಕ್ಕ ಮಕ್ಕಳಿಗಾಗಿ ಇರುವ ಯಾವುದೇ ಅಪಾಯಗಳನ್ನು ಹುಡುಕಿ ಮತ್ತು ಪರಿಹರಿಸಿ
 • ವಯಸ್ಕರೊಂದಿಗೆ ಚಿಕ್ಕ ಮಕ್ಕಳಿಗೆ ಆಗುವ ಗಾಯದ ಅಪಾಯಗಳನ್ನು ಕುರಿತು ನಾವು ತಿಳಿದಿರುವುದಷ್ಟು ಹಂಚಿಕೊಳ್ಳಿ.
 • ಮಗುವು ಉಸಿರುಗಟ್ಟಿಸುತ್ತಿರುವಾಗ ಏನು ಮಾಡಬೇಕೆಂದು ತಿಳಿದುಕೊಳ್ಳಿ ಮತ್ತು ನಮ್ಮ ಪೋಷಕರು, ಅಜ್ಜಿ ಮತ್ತು ಸಹೋದರರು ಮತ್ತು ಸಹೋದರಿಯರಿಗೆ ತೋರಿಸಿ.
 • ಸುಡುವಿಕೆ,ಬೀಳುವಿಕೆ ಮತ್ತು ಮುಳುಗುವಿಕೆ ಅಥವಾ ಸಂಚಾರ ದಟ್ಟಣೆಯನ್ನು ಹೊಂದಿರುವ ರಸ್ತೆಗಳು ಸಂಭವಿಸುವ ಸಾಮಾನ್ಯ ಅಪಾಯಗಳನ್ನು ಗುರುತಿಸಲು ಕಲಿಯಿರಿ.
 • ಮನೆಯಲ್ಲಿ ಸುಡುವಿಕೆಯ ಅಪಾಯಗಳು ಯಾವುವು? ಯಾರಿಗೆ ಆದರೂ ಸುಟ್ಟರೇ ನಾವು ಏನು ಮಾಡಬೇಕು? ಅಡುಗೆಮನೆಯಲ್ಲಿ ಬಿಸಿ ಮತ್ತು ಬಿಸಿ ದ್ರವಗಳಿಂದ ಮಕ್ಕಳನ್ನು ಹೇಗೆ ಸುರಕ್ಷಿತವಾಗಿರಿಸಿಕೊಳ್ಳಬಹುದು? ನಮ್ಮ ಸಮುದಾಯದ ಜನರು ಮತ್ತು ಮಕ್ಕಳನ್ನು ಅಪಾಯಗಳಿಂದ ದೂರವಿರಿಸುತ್ತಿರುವುದು ಹೇಗೆ? ವಯಸ್ಕರಿಗಿಂತಲೂ ಚಿಕ್ಕ ಮಕ್ಕಳು ಉಸಿರುಗಟ್ಟಿಸುವ ತೊಂದರೆಯ ಹೆಚ್ಚಿನ ಅಪಾಯದಲ್ಲಿರುವುದು ಏಕೆ? ನೀರಿನಲ್ಲಿ ಮುಳುಗುತ್ತಿರುವ ವ್ಯಕ್ತಿಗೆ ನಾವು ತೊಂದರೆಗೆ ಸಿಲುಕದೇ ಅವರಿಗೆ ಸಹಾಯ ಮಾಡುವ ಬಗೆ ಹೇಗೆ?

ಟಿಪ್ಪಿ ಟ್ಯಾಪ್ ಹೇಗೆ ಮಾಡುವುದು ಅಥವಾ ಪ್ರಥಮ ಚಿಕಿತ್ಸಾ ಕಿಟ್‍ನಲ್ಲಿ ಯಾವುದನ್ನು ಸೇರಿಸುವುದು ಅಥವಾ ಆಗಬಹುದಾದ ಸಮಸ್ಯೆಗಳನ್ನು ಗುರುತಿಸುವುದು ಹೇಗೆ ಎಂಬುದರ ಕುರಿತು ಹೆಚ್ಚಿನ ನಿರ್ದಿಷ್ಟ ಮಾಹಿತಿಗಾಗಿ, ದಯವಿಟ್ಟು www.childrenforhealth.org ಅಥವಾ clare@childrenforhealth.org ಅನ್ನು ಸಂಪರ್ಕಿಸಿ.

ಕನ್ನಡ ಲಿಪಿ Home