ಕಲಿಕೆ ಮತ್ತು ಹಂಚಿಕೆಗೆ ಮಕ್ಕಳಿಗಾಗಿ 100 ಆರೋಗ್ಯ ಸಂದೇಶಗಳು ಸರಳವಾಗಿದ್ದು, ವಿಶ್ವಾಸಾರ್ಹ ಆರೋಗ್ಯ ಶಿಕ್ಷಣ ಸಂದೇಶಗಳು 8-14 ವರ್ಷಗಳ ನಡುವಿನ ಮಕ್ಕಳಿಗೆ ಉದ್ದೇಶಿತವಾಗಿವೆ. ಹಾಗಾಗಿ ಇದು 10-14 ವರ್ಷ ವಯಸ್ಸಿನ ನಡುವಿನ ತರುಣಾವಸ್ಥೆಯವರನ್ನು ಒಳಗೊಳ್ಳುತ್ತದೆ. 10-14 ವರ್ಷ ಪ್ರಾಯದ ತರುಣಾವಸ್ಥೆಯಲ್ಲಿರುವ ಮಕ್ಕಳಿಗೆ ಮಾಹಿತಿ ಒದಗಿಸುತ್ತದೆ ಎಂಬುದನ್ನು ಖಚಿತಪಡಿಸಿಕೊಳ್ಳುವುದು ವಿಶೇಷವಾಗಿ ಉಪಯುಕ್ತವೂ ಹಾಗು ಮುಖ್ಯವಾಗಿರುತ್ತದೆ ಎಂದು ನಾವು ಭಾವಿಸುತ್ತೇವೆ, ಏಕೆಂದರೆ ಈ ವಯಸ್ಸಿನ ಮಕ್ಕಳು ತಮ್ಮ ಕುಟುಂಬದ ಚಿಕ್ಕ ಮಕ್ಕಳ ಮೇಲೆ ಕಾಳಜಿ ವಹಿಸುವುದು ಸಹಜ. ಜೊತೆಗೆ, ಈ ರೀತಿಯಲ್ಲಿ ಅವರ ಕುಟುಂಬಗಳಿಗೆ ಸಹಾಯ ಮಾಡಲು ಅವರು ಮಾಡುತ್ತಿರುವ ಕೆಲಸವನ್ನು ಗುರುತಿಸುವುದು ಮತ್ತು ಮೆಚ್ಚಿಕೊಳ್ಳುವುದು ಮುಖ್ಯವಾಗಿರುತ್ತದೆ.

ಈ ನೂರು ಸಂದೇಶಗಳು ಮಲೇರಿಯಾ, ಭೇದಿ, ಪೌಷ್ಟಿಕತೆ, ಕೆಮ್ಮು-ಶೀತ-ಜ್ವರ, ಹೊಟ್ಟೆಯ ಹುಳುಗಳು, ನೀರು ಹಾಗೂ ಶುಚಿತ್ವ, ಪ್ರತಿರೋಧಕ ಲಸಿಕೆಗಳು, ಎಚ್ಐವಿ ಮತ್ತು ಏಡ್ಸ್, ಹಾಗೂ ಅಪಘಾತಗಳು, ಘಾಯ ಮತ್ತು ಮಕ್ಕಳ ಆರಂಭಿಕ ಬೆಳೆವಣಿಗೆಯಂತಹ ಹತ್ತು ಪ್ರಮುಖ ಆರೋಗ್ಯ ವಿಷಯಗಳಲ್ಲಿ ಪ್ರತಿಯೊಂದರ ಬಗ್ಗೆಯೂ ಹತ್ತು ಸಂದೇಶಗಳನ್ನು ಒಳಗೊಂಡಿವೆ. ಸರಳವಾದ ಈ ಸಂದೇಶಗಳು ಪೋಷಕರಿಗೆ, ಆರೋಗ್ಯ ಶಿಕ್ಷಕರಿಗೆ ಮಕ್ಕಳ ಜೊತೆ ಮನೆಯಲ್ಲಿ, ಶಾಲೆಗಳಲ್ಲಿ, ಕೂಟಗಳಲ್ಲಿ ಹಾಗೂ ಕ್ಲಿನಿಕ್ಕುಗಳಲ್ಲಿ ವ್ಯವಹರಿಸಲು ನೆರವಾಗುತ್ತವೆ.

ಇಲ್ಲಿ ವಿಷಯ 1 ರ ಬಗ್ಗೆ 10 ಸಂದೇಶಗಳಿವೆ: ಶಿಶುಗಳ ಆರೈಕೆ

 1. ನಿಮಗೆ ಸಾಧ್ಯವಾದಷ್ಟು ಹೆಚ್ಚಾಗಿ ಶಿಶು ಮತ್ತು ಮಕ್ಕಳೊಂದಿಗೆ ಆಟ ಆಡುವುದು, ಮುದ್ದಾಡುವುದು, ಮಾತನಾಡುವುದು, ನಗುವುದು ಮತ್ತು ಹಾಡು ಹೇಳುವುದು.
 2. ಶಿಶುಗಳು ಮತ್ತು ಮಕ್ಕಳು ಸುಲಭವಾಗಿ ಕೋಪಗೊಳ್ಳುವರು, ಭಯಪಡುವರು ಮತ್ತು ಅಳುವರು, ಮತ್ತು ಅವರ ಭಾವನೆಗಳನ್ನು ಅವರಿಗೆ ವಿವರಿಸಲು ಸಾಧ್ಯವಿಲ್ಲ. ಯಾವಾಗಲೂ ತಾಳ್ಮೆಯಿಂದಿರಿ.
 3. ಚಿಕ್ಕ ಮಕ್ಕಳು ಬಹುಬೇಗನೆ ಕಲಿಯುವರು: ನಡೆಯುವುದು ಹೇಗೆ, ಶಬ್ದ ಮಾಡುವುದು ಹೇಗೆ, ತಿನ್ನುವುದು ಮತ್ತು ಕುಡಿಯುವುದು ಹೇಗೆ. ಅವರಿಗೆ ಸಹಾಯ ಮಾಡಿ ಆದರೆ ಅವರು ಸುರಕ್ಷಿತ ತಪ್ಪು ಮಾಡಲು ಅವಕಾಶ ನೀಡುವಂತೆ ಎಚ್ಚರವಹಿಸಿ!
 4. ಎಲ್ಲಾ ಹುಡುಗಿಯರು ಮತ್ತು ಹುಡುಗರು ಪರಸ್ಪರರಂತೆಯೇ ಮುಖ್ಯರಾಗಿರುವರು. ಎಲ್ಲರನ್ನೂ, ವಿಶೇಷವಾಗಿ ಖಾಯಿಲೆಯಿರುವ ಮತ್ತು ಊನತೆ ಹೊಂದಿರುವ ಮಕ್ಕಳನ್ನು ಸರಿಯಾಗಿ ವ್ಯವಹರಿಸಿ.
 5. ಮಕ್ಕಳು ತಮ್ಮ ಸುತ್ತಮುತ್ತ ನಡೆಯುವ ಚಟುವಟಿಕೆಗಳನ್ನು ನಕಲು ಮಾಡುವರು. ನಿಮ್ಮನ್ನು ನೀವು ನೋಡಿಕೊಳ್ಳಿ, ಅವರ ಬಳಿ ಉತ್ತಮವಾಗಿ ನಡೆದುಕೊಳ್ಳಿ ಮತ್ತು ಅವರಿಗೆ ಉತ್ತಮ ದಾರಿ ತೋರಿಸಿ.
 6. ಮಕ್ಕಳು ಅತ್ತಾಗ, ಅದಕ್ಕೆ ಕಾರಣವಿರುತ್ತದೆ (ಹಸಿವು, ಭಯ, ನೋವು). ಅದು ಏಕೆ ಎಂಬುದನ್ನು ಕಂಡುಕೊಳ್ಳಲು ಪ್ರಯತ್ನಿಸಿ.
 7. ಸಂಖ್ಯೆ ಮತ್ತು ಪದಬಂಧಗಳು, ಪೈಂಟಿಂಗ್ ಹಾಗೂ ಡ್ರಾಯಿಂಗ್ ಆಟಗಳನ್ನು ಆಡುವ ಮೂಲಕ ಶಾಲೆಯಲ್ಲಿ ಕಲಿಕೆಗಾಗಿ ಮಕ್ಕಳು ಸಿದ್ಧರಾಗುವಂತೆ ಸಹಾಯ ಮಾಡಿ.
 8. ಒಂದು ಗುಂಪಿನಲ್ಲಿ, ಒಂದು ಮಗುವು ಅಂಬೆಗಾಲಿಡುವ ಮಟ್ಟಕ್ಕೆ ಹೇಗೆ ಬೆಳೆಯುತ್ತದೆ ಮತ್ತು ಅವುಗಳು ಮಾತನಾಡುವ, ನಡೆಯುವಂತಹ ’ಮೊದಲ’ ಮುಖ್ಯ ನಡೆಯನ್ನು ಯಾವಾಗ ಮಾಡುತ್ತವೆ ಎಂಬುದನ್ನು ನೋಡಿರಿ ಮತ್ತು ಒಂದು ಪುಸ್ತಕದಲ್ಲಿ ದಾಖಲಿಸಿಕೊಳ್ಳಿ.
 9. ಶಿಶುಗಳು ಮತ್ತು ಮಕ್ಕಳು ಸ್ವಚ್ಛವಾಗಿರುವರು (ವಿಶೇಶವಾಗಿ ಕೈಗಳು ಮತ್ತು ಮುಖ), ಸುರಕ್ಷಿತ ನೀರು ಕುಡಿಯುವರು ಮತ್ತು ಸಾಕಷ್ಟು ಉತ್ತಮ ಆಹಾರ ಸೇವಿಸುವರು ಎಂಬ ಬಗ್ಗೆ ವಯಸ್ಕರ ಕಾಳಜಿ ಆರೈಕೆದಾರರು ಮತ್ತು ಬೆಳೆದ ಮಕ್ಕಳಿಗೆ ಸಹಾಯ ಮಾಡುವ ಮೂಲಕ ರೋಗವನ್ನು ತಡೆಯುವಲ್ಲಿ ಸಹಾಯ ಮಾಡುವುದು.
 10. ಶಿಶು ಮತ್ತು ಮಕ್ಕಳಿಗೆ ಪ್ರೀತಿಯ ಕಾಳಜಿ ನೀಡಿ, ಆದರೆ ನಿಮ್ಮ ಬಗ್ಗೆ ಮರೆತುಬಿಡಬೇಡಿ. ನೀವೂ ಸಹ ಮುಖ್ಯರಾಗಿರತ್ತೀರಿ.

ಪರಿಣತ ಆರೋಗ್ಯ ಶಿಕ್ಷಕರು ಹಾಗೂ ತಜ್ಞ ವೈದ್ಯರುಗಳು ಪರಿಶೀಲಿಸಿರುವ ಈ ಆರೋಗ್ಯ ಸಂದೇಶಗಳು ಓ.ಆರ್.ಬಿ. ಯ ಆರೋಗ್ಯ ಕುರಿತ ವೆಬ್ ತಾಣ (http://www.health-orb.org) ದಲ್ಲಿಯೂ ಲಭ್ಯ.

ಈ ವಿಷಯದ ಬಗ್ಗೆ ಇನ್ನಷ್ಟು ಅರಿವು ಮೂಡಲು ಹಾಗೂ ಈ ಸಂದೇಶಗಳನ್ನು ಹಂಚಿಕೊಳ್ಳಲು ಮಕ್ಕಳಿಗೆ ನೆರವಾಗುವ ಕೆಲವು ಚಟುವಟಿಕೆಗಳು ಇಲ್ಲಿವೆ.

ಶಿಶುಗಳ ಆರೈಕೆ: ಮಕ್ಕಳು ಏನನ್ನು ಮಾಡಲು ಸಾಧ್ಯ?

 • ನಮ್ಮ ಸ್ವಂತ ಪದಗಳಲ್ಲಿ ಮತ್ತು ನಮ್ಮ ಸ್ವಂತ ಭಾಷೆಯಲ್ಲಿ ಶಿಶುಗಳ ಆರೈಕೆಯಬಗ್ಗೆ ನಮ್ಮದೇ ಆದ ಸ್ವಂತ ಸಂದೇಶಗಳನ್ನು ರಚಿಸುವುದು!
 • ನಾವು ಸಂದೇಶಗಳನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲದಂತೆ ಆಗಾಗ ಅವುಗಳನ್ನು ನೆನಪಿಸಿಕೊಳ್ಳುವುದು!
 • ಬೇರೆ ಮಕ್ಕಳು ಮತ್ತು ನಮ್ಮ ಕುಟುಂಬದೊಂದಿಗೆ ಸಂದೇಶಗಳನ್ನು ಹಂಚಿಕೊಳ್ಳುವುದು!
 • ಹುಡುಗರು’ ಮತ್ತು ’ಹುಡುಗಿಯರು’ ಎಂದು ಗುಂಪುಗಳನ್ನು ವಿಂಗಡಿಸುವುದು; ಹುಡುಗರು ಹುಡುಗಿಯರ ಆಟಗಳನ್ನು ಮತ್ತು ಹುಡುಗಿಯರು ಹುಡುಗರ ಆಟಗಳನ್ನು ಆಡುವಂತೆ ಮಾಡುವುದು. ನಂತರ, ಎರಡೂ ಗುಂಪುಗಳು ಆಟಗಳನ್ನು ಚರ್ಚಿಸಲು ಬಿಡುವುದು. ಉದಾಹರಣೆಗೆ, ನೀವು ಆಟಗಳನ್ನು ಹುಡುಗರು ಅಥವಾ ಹುಡುಗಿಯರ ಆಟಗಳು ಎಂದು ಕರೆಯಲು ಒಪ್ಪಿಕೊಳ್ಳುವಿರಾ? ಏಕೆ ಅಥವ ಏಕೆ ಅಲ್ಲ?
 • ಮನೆಯಲ್ಲಿ ಅಥವಾ ಶಾಲೆಯಲ್ಲಿ ’ಉತ್ತಮ’ ಮತ್ತು ’ಕೆಟ್ಟ’ ನಡವಳಿಕೆಯನ್ನು ಮತ್ತು ಅವರು ಏಕೆ ಹೀಗೆ ವಿವರಿಸಲ್ಪಟ್ಟಿದೆ ಎಂಬುದನ್ನು ಚರ್ಚಿಸುವುದು.
 • ಈ ವಿಷಯದ ಬಗ್ಗೆ ನಮಗೆ ಏನು ಗೊತ್ತು ಎಂಬುದನ್ನು ಬೇರೆಯವರಿಗೆ ತೋರಿಸಲು ಪೊಸ್ಟರ್‌ಗಳನ್ನು ಮಾಡುವುದು.
 • ಮನೆಯಲ್ಲಿ, ಶಾಲೆಯಲ್ಲಿ ಅಥವಾ ಸಮುದಾಯ ಗುಂಪುಗಳಲ್ಲಿ, ಮೊಬೈಲ್ಸ್, ಗೊರಕೆ, ಬಿಲ್ಡಿಂಗ್ ಬ್ಲಾಕ್ಸ್, ಗೊಂಬೆಗಳು, ಪ್ರಾಣಿಗಳು ಮತ್ತು ಚಿತ್ರದ ಪುಸ್ತಕಗಳಂತಹ ಆಟಿಕೆ-ಮಾಡುವಂತಹ ಸ್ಪರ್ಧೆಗಳನ್ನು ಸಂಘಟಿಸುವುದು.
 • ಸಾಬೂನಿನಲ್ಲಿ ಕೈಗಳನ್ನು ತೊಳೆದುಕೊಳ್ಳುವುದು, ಪ್ರತಿರಕ್ಷಣೆ, ಮತ್ತು ಸಂತುಲಿತ ಆಹಾರ ಸೇವನೆಯಂತಹ ರೋಗವನ್ನು ತಡೆಯಲು ಸರಳ ಕ್ರಮಗಳನ್ನು ತೋರಿಸಲು ಡ್ರಾಯಿಂಗ್ ಮತ್ತು ಪೊಸ್ಟರ್‌ಗಳನ್ನು ಮಾಡುವುದು.
 • ಆರೈಕೆದಾರರು ಸಣ್ಣ ಮಕ್ಕಳೊಂದಿಗೆ ಆಟವಾಡುತ್ತಿರುವಂತಹ ಸಣ್ಣ ನಾಟಕವನ್ನು ರಚಿಸುವುದು. ಇಬ್ಬರು ತಾಯಂದಿರ ನಡುವಿನ ಸಂವಾದವನ್ನು ಆಟದ ರೂಪಕ್ಕೆ ಅವರು ತರಬಹುದು; ಮಕ್ಕಳು ಮೌನವಾಗಿರಬೇಕೆಂದು ನಂಬುವ ಒಬ್ಬ ತಾಯಿ ಮತ್ತು ಮಕ್ಕಳು ಆಟವಾಡುತ್ತಾ ಬೆಳೆಯಬೇಕೆಂದು ನಂಬುವ ಮತ್ತೊಬ್ಬ ತಾಯಿ! ಕೇವಲ ಭಂಗಿಗಳು ಮತ್ತು ಮುಖದ ಅಭಿವ್ಯಕ್ತಿಯಿಂದ ಭಾವೋದ್ರೇಕ/ಭಾವನೆಯನ್ನು ವ್ಯಕ್ತಪಡಿಸುವುದು. ಬೇರೆ ಮಕ್ಕಳು ಭಾವನೆ ಅಥವಾ ಭಾವೊದ್ರೇಕ ಎಂದರೇನು ಎಂಬುದನ್ನು ಊಹಿಸುವರು.
 • ಮಕ್ಕಳು ಏಕೆ ಅಳುವರು ಮತ್ತು ನಗುವರು ಎಂಬುದನ್ನು ಪೋಷಕರು ಮತ್ತು ಅಜ್ಜ/ಅಜ್ಜಿಯರಿಗೆ ಕೇಳಿರಿ ಮತ್ತು ಅವರು ಏನನ್ನು ಕಂಡುಕೊಂಡರು ಎಂಬುದನ್ನು ತರಗತಿಯಲ್ಲಿರುವ ಇತರರೊಂದಿಗೆ ಹಂಚಿಕೊಳ್ಳಿ.
 • ಒಂದು ತರಗತಿ ಅಥವಾ ಗುಂಪು ಸ್ಥಳೀಯ ಸಮುದಾಯದಿಂದ ಒಂದು ಮಗುವನ್ನು ದತ್ತು ತೆಗೆದುಕೊಳ್ಳಬಹುದು. ಮಗುವು ಹೇಗೆ ಬೆಳೆಯುತ್ತಿದೆ ಎಂಬುದನ್ನು ಹಂಚಿಕೊಳ್ಳಲು ಪ್ರತಿ ತಿಂಗಳು ತಾಯಿಯು ಗುಂಪಿಗೆ ಭೇಟಿ ನೀಡುವರು.
 • ಸ್ವಚ್ಛವಾಗಿರುವುದು ಮತ್ತು ಶುದ್ದ, ಸುರಕ್ಷಿತ ನೀರನ್ನು ಕುಡಿಯುವಂತಹ ರೋಗಗಳನ್ನು ತಡೆಯುವ ಸರಳ ಕ್ರಮಗಳನ್ನು ವಿವರಿಸಲು ಒಂದು ಹಾಡು ಮಾಡುವುದು ಮತ್ತು ತಮ್ಮ ಕಿರಿಯ ಸಹೋದರ/ಸಹೋದರಿಯೊಂದಿಗೆ ಮನೆಯಲ್ಲಿ ಆ ಹಾಡುಗಳನ್ನು ಹಾಡುವುದು.
 • ಬೆಳೆದಿರುವ ಅಥವಾ ಪ್ರಾಪ್ತ ಮಕ್ಕಳು ಪೋಷಕರನ್ನು ಸಂದರ್ಶನ ಮಾಡುವರು ಮತ್ತು ತಮ್ಮ ಶಿಶುಗಳು ಮತ್ತು ಮಕ್ಕಳ ಆರೈಕೆ ಮಾಡುವಾಗ ಅವರಿಗೆ ಹೆಚ್ಚು ಕಷ್ಟಕರವಾಗಿದ್ದುದು ಯಾವುದು ಮತ್ತು ಅವರಿ ಹೆಚ್ಚು ಸಹಾಯಕವಾಗಿದ್ದುದು ಯಾವುದು ಎಂಬ ಬಗ್ಗೆ ಕೇಳುವುದು.
 • ಒಂದು ಮಗುವಿನ ಮೆದುಳು ಹೇಗೆ ಬೆಳೆಯುತ್ತದೆ ಎಂಬ ಬಗ್ಗೆ ನಿಮಗೆ ಹೆಚ್ಚು ತಿಳಿಸಲು ಒಬ್ಬ ಆರೋಗ್ಯ ಕಾರ್ಯಕರ್ತ ಅಥವಾ ವಿಜ್ಞಾನ ಶಿಕ್ಷಕರನ್ನು ಕೇಳುವುದು.
 • ಬೆಳೆದ ಅಥವಾ ಪ್ರಾಪ್ತ ಮಕ್ಕಳು ತಮಗೆ ಹಾಡುಗಳು, ಕಥೆಗಳು ಮತ್ತು ಆಟಗಳನ್ನು ಕಲಿಸಲು ಮತ್ತು ಶಿಶುಗಳು ಮತ್ತು ಮಕ್ಕಳಿಗಾಗಿ ಹಾಡುಗಳನ್ನು ಹಾಡಲು ಸಮುದಾಯದಲ್ಲಿರುವ ಹಿರಿಯರನ್ನು ಕೇಳುವುದು.
 • ಶಿಶುಗಳು ಅನಾರೋಗ್ಯಕ್ಕೆ ತುತ್ತಾಗುವುದನ್ನು ತಡೆಯಲು ಮುಖ್ಯವಾಗಿರುವುದು ಏನು ಎಂಬ ಬಗ್ಗೆ ಅವರು ಯೋಜಿಸುವಂತೆ ಮಾಡುವುದು ಯಾವುದು ಎಂಬುದನ್ನು ಮಕ್ಕಳು ವಯಸ್ಕರನ್ನು ಕೇಳಬಹುದು.

ಹೆಚ್ಚಿನ ಮಾಹಿತಿಗಾಗಿ ದಯವಿಟ್ಟು www.childrenforhealth.org ಅಥವಾ clare@childrenforhealth.org ಅನ್ನು ಸಂಪರ್ಕಿಸಿ.

ಕನ್ನಡ ಲಿಪಿ Home